ಮಂಜೇಶ್ವರ: ಕಿಲಾದ ನೇತೃತ್ವದಲ್ಲಿ ಕೇಂದ್ರೀಯ ಯೋಜನೆಯಾದ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ (ಆರ್‍ಜಿಎಸ್‍ಎ) ಭಾಗವಾಗಿ ನಿರ್ಮಿಸಲಾದ ಮಂಜೇಶ್ವರ ಬ್ಲಾಕ್ ಪಂಚಾಯತಿ ಸಂಪನ್ಮೂಲ ಕೇಂದ್ರದ ಕಚೇರಿಯನ್ನು ಕಿಲಾ ಮಹಾನಿರ್ದೇಶಕ ಡಾ. ಜಾಯ್ ಇಲಮಾನ್ ಸೋಮವಾರ ಉದ್ಘಾಟಿಸಿದರು. ಸಂಪನ್ಮೂಲ ಕೇಂದ್ರದ ಕಾರ್ಯಗಳಲ್ಲಿ ಉದ್ಯೋಗಾರ್ಹತಾ ಕೇಂದ್ರ, ಕಾರ್ಮಿಕ ಸಂಘಗಳ ಸಮನ್ವಯ ಮತ್ತು ನಿರಂತರ ಚಟುವಟಿಕೆಗಳು, ತ್ಯಾಜ್ಯ ನಿರ್ವಹಣೆ ಚಟುವಟಿಕೆಗಳು, ತರಬೇತಿ ವ್ಯವಸ್ಥೆ ಮತ್ತು ಬ್ಲಾಕ್ ಮಟ್ಟದ ಪಿಎಂಯು ಸೇರಿವೆ ಎಂದು ಅವರು ಮಾಹಿತಿ ನೀಡಿದರು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಯೋಜನಾ ಅಧಿಕಾರಿ ಅಜಯ್ ಪನಯಾಲ್ ಸಂಪನ್ಮೂಲ ಕೇಂದ್ರದ ಚಟುವಟಿಕೆಗಳನ್ನು ವಿವರಿಸಿದರು.
ಮಂಜೇಶ್ವರಂ ಬ್ಲಾಕ್ ಪಂಚಾಯತಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲೆವಿನೋ ಮೊಂತಾರೊ, ಮೀಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆ. ಜಯಂತಿ, ಪಂಚಾಯತಿ ಉಪಾಧ್ಯಕ್ಷರು, ಬ್ಲಾಕ್ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು, ವಿಷಯಾಧಾರಿತ ತಜ್ಞರಾದ ಅನಿಲ್, ಶೃತಿ, ರೇಷ್ಮಾ, ರಾಧಿಕಾ, ಆರ್ ಜಿಎಸ್ ಎ ಬ್ಲಾಕ್ ಸಂಯೋಜಕಿ ವೀಣಾ, ಕಿಲಾದ ಆರ್ ಪಿಗಳಾದ ಕಣ್ಣನ್ ನಾಯರ್, ಪಪ್ಪನ್ ಕುಟ್ಟಮ್ಮತ್, ಮಾಧÀವನ್ ನಂಬಿಯಾರ್, ಇಬ್ರಾಹಿಂ ಪೈವಳಿಕೆ ಮತ್ತು ಬ್ಲಾಕ್ ಅಧಿಕಾರಿಗಳು ಉಪಸ್ಥಿತರಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶಂಸೀನಾ ಸ್ವಾಗತಿಸಿ, ಜಂಟಿ ಬಿಡಿಒ ನಾರಾಯಣ ವಂದಿಸಿದರು.