ಕಾಸರಗೋಡು: ಉತ್ತರಮಲಬಾರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ)ಸ್ಲೀಪರ್‍ಸೆಲ್ ಸಕ್ರಿಯವಾಗಿರುವ ಬಗ್ಗೆ ಪೊಲೀಸ್ ಗುಪ್ತಚರವಿಭಾಗ ಸ್ಪೆಶ್ಯಲ್ ಬ್ರಾಂಚ್ ವರದಿಮಾಡಿದೆ.
ನಿಷೇಧಕ್ಕೂ ಮೊದಲು ಪಿಎಫ್‍ಐ ಶಕ್ತಿಕೇಂದ್ರಗಳಾಗಿದ್ದ ಪ್ರದೇಶದಲ್ಲಿ ಸ್ಲೀಪರ್ ಸೆಲ್ ಗುಪ್ತವಾಗಿ ಕಾರ್ಯಾಚರಿಸುತ್ತಿದೆ. ಅಲ್ಲದೆ ದ.ಭಾರತದ ಕೆಲವೊಂದು ಕೇಂದ್ರಗಳಲ್ಲೂ ಪಿಎಫ್‍ಐ ಸ್ಲೀಪರ್ ಸೆಲ್ ಕಾರ್ಯಾಚರಿಸುತ್ತಿರುವ ಬಗ್ಗೆ ಎನ್‍ಐಗೂ ಮಾಹಿತಿ ಲಭಿಸಿದೆ. ಈ ಬಗ್ಗೆ ಸಮಗ್ರಮಾಹಿತಿ ಕಲೆಹಾಕಲು ಎನ್‍ಐಎ ತೊಡಗಿದೆ. ತೊಡಪುಳದಲ್ಲಿ ಪ್ರಾದ್ಯಾಪಕನ ಕೈ ತುಂಡರಿಸಿದ ಪ್ರಕರಣದ ಒಂದನೇ ಆರೋಪಿ, ಪಿಎಫ್‍ಐ ಕಾರ್ಯಕರ್ತ,ಪೆರುಂಬಾವೂರ್ ನಿವಾಸಿ ಸವಾದ್‍ನ ಬಂಧನವಾಗುತ್ತಿದ್ದಂತೆ ನಿಷೇದಿತ ಪಿಎಫ್‍ಐ ಸ್ಲೀಪರ್‍ಸೆಲ್ ಕಾರ್ಯಾಚರಿಸುತ್ತಿರುವ ಬಗ್ಗೆಯೂ ಮಾಹಿತಿ ಕಲೆಹಾಕಿ, ಈ ಬಗ್ಗೆ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಸವಾದ್ 13ವರ್ಷಗಳ ಕಾಲ ತಲೆಮರೆಸಿಕೊಂಡು ವಾಸಿಸಲು ಪಿಎಫ್‍ಐ ಸಹಾಯ ಒದಗಿಸಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ಎನ್‍ಐಎ ತನಿಖೆ ಮುಂದುವರಿಸಿದೆ. ಜತೆಗೆ ಸವಾದ್‍ಗೆ ಕೆಲಸ ಲಭ್ಯವಾಗಿಸಿರುವುದು, ಕಾಸರಗೋಡಿನ ಯುವತಿ ಜತೆ ಮದುವೆಗೆ ಸಹಾಯ, ಬಾಡಿಗೆ ಮನೆ ನೀಡಿರುವುದು, ತಲೆಮರೆಸಿಕೊಳ್ಳಲು ಅವಕಾಶಮಾಡಿಕೊಟ್ಟಿರುವವರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.