ಕೊಲ್ಲಂ: ಭವಿಷ್ಯದಲ್ಲಿ ಅಯೋಧ್ಯೆ ಜಗತ್ತಿನ ಅತಿ ದೊಡ್ಡ ಯಾತ್ರಾ ಕೇಂದ್ರವಾಗಲಿದೆ ಎಂದು ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಹೇಳಿದ್ದಾರೆ. ಮಹಾಸಂಪರ್ಕ ಯಜ್ಞದ ಅಂಗವಾಗಿ ಆರ್‍ಎಸ್‍ಎಸ್ ಶಾಖೆಯ ಸಹಸಂಪರ್ಕ ಪ್ರಮುಖ್ ಸಿ.ಸಿ. ಶೆಲ್ವನ್ ಅವರಿಂದ ಅಯೋಧ್ಯೆಯ ಅಕ್ಷತೆ ಪ್ರಸಾದ ಸ್ವೀಕರಿಸಿ ಅವರು ಮಾತನಾಡಿದರು.
ಯಾರೂ ಆಹ್ವಾನಿಸದಿದ್ದರೂ ಅಯೋಧ್ಯೆಗೆ ಗ್ರಾಮ-ಗ್ರಾಮಗಳಿಂದ ಭಕ್ತರು ಅಯೋಧ್ಯೆಗೆ ಆಗಮಿಸುತ್ತಾರೆ ಮತ್ತು ಭಾರೀ ನೂಕುನುಗ್ಗಲಿನಿಂದಾಗಿ ದೇವಾಲಯದ ಪ್ರಾಣ ಪ್ರತಿಷ್ಠಾ ಸಮಯದಲ್ಲಿ ಹೆಚ್ಚಿನ ಜನರು ಭೇಟಿ ನೀಡುವುದರಿಂದ ದರ್ಶನ ನಡೆಸಲು ಸಾಧ್ಯವಾಗದು. ಆ ಬಳಿಕ ಸಾವಕಾಶವಾಗಿ ಭಕ್ತರು ಭೇಟಿ ನೀಡುವುದು ಉತ್ತಮ ಎಂದವರು ತಿಳಿಸಿದರು.
ಗಣೇಶ್ ಕುಮಾರ್ ಅವರು ವಳಕಾದಲ್ಲಿರುವ ಅವರ ಕುಟುಂಬದ ಮನೆಗೆ ಬಂದಾಗ ಅಕ್ಷತೆ, ಶ್ರೀರಾಮ ಭಾವಚಿತ್ರ ಮತ್ತು ಕರಪತ್ರವನ್ನು ಹಸ್ತಾಂತರಿಸಲಾಯಿತು.
ಆರ್‍ಎಸ್‍ಎಸ್ ಶಬರಿಗಿರಿ ವಿಭಾಗದ ಸಂಯೋಜಕ ಆರ್. ಜಯಪ್ರಕಾಶ್, ಅಂಚಲ್ ಖಂಡ ಬೌದ್ದೀಕ್ ಪ್ರಮುಖ್ ಅನೂಪ್ ಹಾಗೂ ಬಾಲಗೋಕುಲಂ ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್ ಉಪಸ್ಥಿತರಿದ್ದರು.