ಕಾಸರಗೋಡು: ಪಂಚಾಯತ್ ಸದಸ್ಯೆಯೋರ್ವರು ರಸ್ತೆ ಬದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೊಗ್ರಾಲ್ ಪುತ್ತೂರು ಸಮೀಪ ನಡೆದಿದೆ.
ಮೊಗ್ರಾಲ್ ಪುತ್ತೂರು ಪಂಚಾಯತ್ ಮೂರನೇ ವಾರ್ಡ್ ಸದಸ್ಯೆ ಪುಷ್ಪಾ (45) ಮೃತ ಪಟ್ಟವರು.
ಸೋಮವಾರ ಮಧ್ಯಾಹ್ನ ಪರಿಸರ ನಿವಾಸಿಯೋರ್ವರು ಗಮನಿಸಿದ್ದು, ಕೂಡಲೇ ಸ್ಥಳೀಯರ ನೆರವಿನಿಂದ ಆಟೋ ರಿಕ್ಷಾ ವೊಂದರಲ್ಲಿ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಆಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮೊಗ್ರಾಲ್ ಪುತ್ತೂರು ಕೋಟೆಗುಡ್ಡೆ ಸಮೀಪ ಅವರ ಮೃತದೇಹ ಪತ್ತೆಯಾಗಿದೆ.
ಪುಷ್ಪಾ ಅವರು ಸಂಬಂಧಿಕರ ಮನೆಗೆಂದು ತೆರಳಿದ್ದರು ಎನ್ನಲಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.