ನವದೆಹಲಿ: ಮುಂಬೈನಿಂದ ಗುವಾಹಟಿಗೆ ತೆರಳುತ್ತಿದ್ದ ಇಂಡಿಗೊ ವಿಮಾನ ಶನಿವಾರ ಬೆಳಗ್ಗೆ ದಟ್ಟ ಮಂಜಿನಿಂದಾಗಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಾನು ಮುಂಬೈನಿಂದ ಗುವಾಹಟಿಗೆ ಇಂಡಿಗೊ6E-5319 ವಿಮಾನದಲ್ಲಿ ತೆರಳುತ್ತಿದ್ದೆ. ದಟ್ಟ ಮಂಜಿನ ಕಾರಣದಿಂದ ಈ ವಿಮಾನ ಗುವಾಹಟಿಯಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಬದಲಾಗಿ, ಅದು ಢಾಕಾದಲ್ಲಿ ಇಳಿಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ತಮ್ಮ ಪಾಸ್‌ಪೋರ್ಟ್ ಇಲ್ಲದೆ ಅಂತರರಾಷ್ಟ್ರೀಯ ಗಡಿ ದಾಟಿದ್ದಾರೆ ಎಂದು ಬರೆದುಕಂಡಿದ್ದಾರೆ.
ನಾವು ಇನ್ನೂ ವಿಮಾನದೊಳಗೆ ಇದ್ದೇವೆ. ಸುಮಾರು 9 ಗಂಟೆಗಳ ಕಾಲ ವಿಮಾನದೊಳಗೆ ಸಿಲುಕಿಕೊಂಡಿದ್ದೇವೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ನಾನು ಭಾರತ್ ಜೋಡೊ ನ್ಯಾಯ್ ಯಾತ್ರೆಗಾಗಿ ಮಣಿಪುರದ ಇಂಫಾಲಕ್ಕೆ ಹೊರಟ್ಟಿದ್ದೆ. ಮೊದಲು ಗುವಾಹಟಿ ತಲುಪಿದ ಬಳಿಕ ಇಂಫಾಲಗೆ ಹೋಗುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನವನ್ನು ಢಾಕದಲ್ಲಿ ಇಳಿಸಬೇಕಾಯಿತು. ಪ್ರಯಾಣಿಕರಿಗೆ ನಮ್ಮ ತಂಡ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಟ್ವೀಟ್ ಮಾಡಿದೆ.