ಕಾಸರಗೋಡು:ಬರಿದಾದ ಗುಡ್ಡಗಳಲ್ಲಿ ಸಸಿ ನೆಟ್ಟು ಬೆಳೆಸಿ ಹಸಿರಾಗಿಸುವ 'ಕಿರು ಅರಣ್ಯ'ಯೋಜನೆಯ ಮೂಲಕ ಪ್ರಕೃತಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕ ಸಂಸ್ಥೆಯೊಂದು ಪಣತೊಟ್ಟಿದೆ. ಸಾಮಾಜಿಕ ಅರಣ್ಯ ಇಲಾಖೆ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ (ಎಚ್‍ಎಎಲ್) ಲಿಮಿಟೆಡ್‍ನ ಕಾಸರಗೋಡು ಪ್ರಧಾನ ಕಛೇರಿ ಮೂಲಕ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಕಿನ್‍ಫ್ರಾ ಕೈಗಾರಿಕಾ ಪ್ರಾಂಗಣದ ಎಚ್‍ಎಎಲ್ ಕೇಂದ್ರ ಕಚೇರಿಯ ಮುಖ್ಯದ್ವಾರದ ಬಳಿ ಎರಡೂವರೆ ಎಕರೆ ಜಮೀನಿನಲ್ಲಿ ಮಾವು, ಹಲಸು, ಬೇವು, ಕೊನ್ನೆ, ರಕ್ತಚಂದನ, ಮಂಜೊಟ್ಟಿ, ಬಿದಿರು, ಪೇರಳೆ ಸೇರಿದಂತೆ ವಿವಿಧ ಪ್ರಬೇದಗಳ 2000ಕ್ಕೂ ಹೆಚ್ಚಿನ ಸಸಿಗಳನ್ನು ನೆಡಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಧನೇಶ್ ಕುಮಾರ್, ಎಚ್ ಎಎಲ್ ಉಪ ಪ್ರಧಾನ ವ್ಯವಸ್ಥಾಪಕ ಎ.ಎಸ್. ಸಜಿ, ಎಚ್‍ಎಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಕೆ.ಜಿ. ಸುನೀಲ್ ಕುಮಾರ್ ಸಸಿ ನೆಡುವ ಕರ್ಯಕ್ರಮಕ್ಕೆ ನೇತೃತ್ವ ನೀಡಿದರು. ಅರಣ್ಯ ಇಲಾಖೆಯ ಸಾಮಾಜಿಕಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಎಚ್‍ಎಎಲ್ ನೌಕರರು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.