HEALTH TIPS

ಕಾಸರಗೋಡಿನ ಕ್ರೀಡಾ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡಲು ಎಚ್‍ಎಎಲ್ ಬದ್ಧ-ಸಜಲ್ ಪ್ರಕಾಶ್

 


 

               ಕಾಸರಗೋಡು: ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಲು ಪ್ರಯತ್ನಿಸುವುದಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಜಲ್ ಪ್ರಕಾಶ್ ತಿಳಿಸಿದ್ದಾರೆ. 

                 ಅವರು ಜಿಲ್ಲಾಡಳಿತ, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಮತ್ತು ಕಾಸರಗೋಡು ನಗರಸಭೆಯ ಸಹಯೋಗದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ (ಎಚ್‍ಎಎಲ್) ಸಾಮಾಜಿಕ ಸುಸ್ಥಿರತೆ ನಿಧಿ ಬಳಸಿ ನಿರ್ಮಿಸಲಾದ ಜಿಲ್ಲಾ ಅಕ್ವಾಟಿಕ್ ಅಕಾಡೆಮಿ ಮತ್ತು ಈಜುಕೊಳವನ್ನು ಉದ್ಘಾಟಿಸಿ ಮಾತನಾಡಿದರು. 

              ಕಾಸರಗೋಡು ನಗರಸಭಾ ಕ್ರೀಡಾಂಗಣದ ಬಳಿಯಿರುವ ವಿದ್ಯಾನಗರದಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರ ಮೂಲಕ 1.72 ಕೋಟಿ ವೆಚ್ಚದಲ್ಲಿ ಜಿಲ್ಲಾ ಅಕ್ವಾಟಿಕ್ ಅಕಾಡೆಮಿ ಹಾಗೂ ಈಜುಕೊಳ ನಿರ್ಮಿಸಲಾಗಿದೆ.   ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಈಜುಕೊಳ ಹಗಲು ಮತ್ತು ರಾತ್ರಿ ವೇಳೆಯಲ್ಲೂ ಕಾರ್ಯಾಚರಿಸುವ ರೀತಿಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಜತೆಗೆ ಈಜುಕೊಳಕ್ಕೆ ಮೇಲ್ಛಾವಣಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

           ಹಣಕಾಸು ಅಧಿಕಾರಿ ಮುಹಮ್ಮದ್ ಸಮೀರ್ ವರದಿ ಮಂಡಿಸಿದರು. ಕಾಸರಗೋಡು ನಗರಸಭೆ ಉಪಾಧ್ಯಕ್ಷೆ ಶಂಸಿದಾ ಫಿರೋಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಪಿ.ಹಬೀಬ್ ರಹಿಮಾನ್ ಅವರು ಅಕ್ವಾಟಿಕ್ ಅಕಾಡೆಮಿ ಮತ್ತು ಈಜುಕೊಳದ ಕೀಲಿಕೈಯನ್ನು ಸ್ವೀಕರಿಸಿದರು. ಸಮಾರಂಭದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಿಇಒ ಸಜಲ್ ಪ್ರಕಾಶ್ ಹಾಗೂ ಈಜುಕೊಳದ ನಿರ್ಮಾಣಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಬೇಗಂ, ಖಾಲಿದ್ ಪಚ್ಚಕ್ಕಾಡ್, ಆರ್.ರೀತಾ, ಸಿಯಾನಾ ಹನೀಫ್, ಎಡಿಎಂ ಕೆ.ನವೀನ್ ಬಾಬು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹ್ಮದ್, ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ, ಎಚ್ ಎಎಲ್ (ಎಚ್ ಆರ್) ಪ್ರಧಾನ ವ್ಯವಸ್ಥಾಪಕ ಕೆ.ಚಂದ್ರಕಾಂತ್, ಎಚ್ ಎಎಲ್ ಹೈದರಾಬಾದ್ ಜನರಲ್ ಮ್ಯಾನೇಜರ್ ಎಂ.ಸತ್ಯನಾರಾಯಣ. , ನಿರ್ಮಿತಿ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಇ.ಪಿ.ರಾಜಮೋಹನ್, ಜಿಲ್ಲಾ ಅಕ್ವಾಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಎಂಟಿಪಿ ಸೈಫುದ್ದೀನ್ ಉಪಸ್ಥೀತರಿದ್ದರು.  ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸ್ವಾಗತಿಸಿದರು. ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯದರ್ಶಿ ಕೆ.ವಿ.ಸುರೇಂದ್ರನ್ ವಂದಿಸಿದರು.

ಈಜು ಕೊಳದಲ್ಲಿ ಸವಲತ್ತು:

            25 ಮೀಟರ್ ಉದ್ದ, 15 ಮೀಟರ್ ಅಗಲ ಮತ್ತು 1.5 ಮೀಟರ್ ಅಗಲಆಳವಾದ ಈಜುಕೊಳವು ಆರು ಲೈನ್‍ಗಳನ್ನು ಹೊಂದಿದೆ. ಎರಡು ಕಛೇರಿ ಕೊಠಡಿಗಳು ಬಟ್ಟೆ ಬದಲಾವಣೆ ಸೌಲಭ್ಯ, ಮಹಿಳೆಯರು ಮತ್ತು ಪುರುಷರಿಗೆ ವಾಶ್ ರೂಂಗಳನ್ನು ಹೊಂದಿವೆ. ಪುರುಷ ಮತ್ತು ಮಹಿಳಾ ಕೋಚ್‍ಗಳು ಇಲ್ಲಿ ಲಭ್ಯರಿರುತ್ತಾರೆ. ಬಿಪಿಎಲ್ ವರ್ಗದ 16 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ ಮತ್ತು ಬಿಪಿಎಲ್ ಅಲ್ಲದವರಿಗೆ ಸಣ್ಣ ಶುಲ್ಕವನ್ನು ವಿಧಿಸಲಾಗುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries