ತಿರುವನಂತಪುರಂ: ಚಿತ್ರ ನಿರ್ಮಾಪಕ ಜಿ.ಸುರೇಶ್ ಕುಮಾರ್ (ತಿರುವನಂತಪುರಂ) ಅವರನ್ನು ಬಿಜೆಪಿ ರಾಜ್ಯ ಸಮಿತಿಗೆ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನಾಮನಿರ್ದೇಶನ ಮಾಡಿದ್ದಾರೆ.ಪಾಲಕ್ಕಾಡ್ ನಗರಸಭೆ ಮಾಜಿ ಅಧ್ಯಕ್ಷೆ ಅಡ್ವ.ಪ್ರಿಯಾ ಅಜಯನ್ ಅವರನ್ನೂ ರಾಜ್ಯ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ.
ಚಿತ್ರ ನಿರ್ದೇಶಕ ಹಾಗೂ ನಟ ಮೇಜರ್ ರವಿ ಹಾಗೂ ಚಿತ್ರನಟ ದೇವನ್ ಈ ಹಿಂದೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ದೇವನ್ ಅವರು ತಮ್ಮದೇ ಪಕ್ಷವಾದ ಕೇರಳ ಪೀಪಲ್ಸ್ ಪಾರ್ಟಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದ ವಿಜಯ ಯಾತ್ರೆಯ ಮುಕ್ತಾಯದ ಹಂತದಲ್ಲಿ ದೇವನ್ ಬಿಜೆಪಿಗೆ ಪ್ರವೇಶ ಪಡೆದಿದ್ದರು.