ಮಧೂರು: ಉಳಿಯ ಧನ್ವಂತರಿ ಮಹಾ ವಿಷ್ಣು ಸನ್ನಿಧಿಯಲ್ಲಿ "ಬಯಲು ಕೋಲ ಮಹೋತ್ಸವವು" ಮಕರ ಮಾಸ 5ರಂದು ನೆರವೇರಿತು. ದೇವರಿಗೆ ವಿಶೇಘಿ ಕಾರ್ತಿಕ ಪೂಜೆ, ದೈವದ ಭಂಡಾರ ಇಳಿದು ತೊಡಂಗಲ್ , ಕುಳಿಚ್ಚಾಟ, ವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ ನಡೆಯಿತು. ಅನ್ನದಾನ ಪಾನಕ ವಿತರಣೆಯ ನಂತರ ಭಂಡಾರವು ಪುನಃ ಶ್ರೀಕ್ಷೇತ್ರಕ್ಕೆ ಹಿಂದಿರುಗಿತು. ಈ ಸಂದರ್ಭ ಆಯೋಜಿಸಿದ್ದ ಸಿಡಿಮದ್ದು ಪ್ರದರ್ಶನ ಅತ್ಯದ್ಭುತ ಮೆರುಗು ನೀಡಿತು. ಉಳಿಯತ್ತಾಯ ವಿಷ್ಣು ಅಸ್ರರ ಮಾರ್ಗದರ್ಶನದಲ್ಲಿ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಸರ್ವ ಸದಸ್ಯರ ಸಹಯೋಗದಿಂದ ಕಾರ್ಯಕ್ರಮ ಸಂಪನ್ನಗೊಂಡಿತು.