ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಪ್ರತಿಪಕ್ಷ ಸಂಘಟನೆ ನೌಕರರು ಜ. 23ರಂದು ರಾಜ್ಯವ್ಯಾಪಕ ಮುಷ್ಕರ ನಡೆಸುವರು. ಬಾಕಿಯಿರುವ ತುಟ್ಟಿಭತ್ತೆ ಮಂಜೂರುಗೊಳಿಸಬೇಕು, ಲೀವ್ ಸರಂಡರ್ ಮರುಸ್ಥಾಪಿಸಬೇಕು, ಪರಿಷ್ಕøತ ವೇತನ ಮಂಜೂರುಮಾಡಬೇಕು, ಪಾಲುದಾರಿಕಾ ಪಿಂಚಣಿ ವ್ಯವಸ್ಥೆ ಹಿಂತೆಗೆಯಬೇಕು ಮುಂತಾದ ಬೇಡಿಕೆ ಮುಂದಿರಿಸಿ ಮುಷ್ಕರ ಆಯೋಜಿಸಲಾಗಿದೆ.
ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರ ಡೈಸ್‍ನೋಸ್ ಘೋಷಿಸಿದ್ದು, ಮುಷ್ಕರದಲ್ಲಿ ಪಾಳ್ಗೊಳ್ಳುವ ನೌಕರರ ವೇತನ ಕಡಿತಗೊಳಿಸುವುದಾಗಿ ತಿಳಿಸಿದೆ.ಅನುಮತಿಯಿಲ್ಲದೆ ರಜೆ ಹಾಕುವ ತಾತ್ಕಾಲಿಕ ಸಏವೆಯ ನೌಕರರನ್ನು ಸೇವೆಯಿಂದ ಅಮಾನತುಗೊಳಿಸುವುದಾಘಿಯೂ ಸರ್ಕಾರ ಎಚ್ಚರಿಸಿದೆ.ಈ ಮಧ್ಯೆ ಜ. 24ರಂದು ಸರ್ಕಾರಿ ನೌಕರರಿಗೆ ರಜೆ ಮಮಜೂರುಗೊಳಿಸುವುದಕ್ಕೆ ಕಠಿಣ ನಿಯಂತ್ರಣವನ್ನೂ ಹೇರಲಾಗಿದೆ. ಸಣ್ಣಪುಟ್ಟ ಕಾರಣಗಳನ್ನು ನೀಡಿ ರಜೆ ಹಾಕುವುದಕ್ಕೆ ಸಾರ್ವಜನಿಕ ಆಡಳಿತ ವಿಭಾಗ ವಿರೋಧ ವ್ಯಕ್ತಪಡಿಸಿದೆ.