ಪೆರ್ಲ: ಪೆರ್ಲ ಪೇಟೆಯಲ್ಲಿ ನಿಯಂತ್ರಣಕಳೆದುಕೊಂಡ ಕಾರು ರಸ್ತೆ ಅಂಚಿನ ಅಂಗಡಿಗೆ ಡಿಕ್ಕಿಯಾಗಿ, ಸ್ಥಳದಲ್ಲಿದ್ದ ಮಹಿಳೆಗೆ ಗಂಭೀರ ಗಾಯಗಳುಂಟಾಗಿದ್ದು, ಎರಡು ಬೈಕ್‍ಗಳಿಗೆ ಹಾನಿಯುಂಟಾಗಿದೆ. ಪೆರ್ಲದ ಗೋಬಿ ವ್ಯಾಪಾರಿ ಗಿರಿ ಅವರ ಪತ್ನಿ ಪ್ರೇಮಾ ಗಾಯಾಳು. ಗಂಭಿರ ಗಾಯಗೊಂಡ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅತಿಯಾದ ವೇಗದಿಂದ ಆಗಮಿಸಿದ ಕಾರು, ಅಂಗಡಿಗೆ ಏಕಾಏಕಿ ನುಗ್ಗಿದೆ. ಈ ಸಂದರ್ಭ ಗೋಬಿ ತಯಾರಿಯಲ್ಲಿ ನಿರತರಾಗಿದ್ದ ಪ್ರೇಮಾ ಅವರಿಗೆ ಡಿಕ್ಕಿಯಾಗಿ, ಅಂಗಡಿ ಒಳಗಿನ ಮೇಜುಗಳಿಗೂ ಹಾನಿಯುಂಟಾಗಿದೆ. ಸ್ಥಳದಲ್ಲಿದ್ದ ಇತರರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಗಾಯಗೊಂಡ ಪ್ರೇಮಾ ಅವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಪಘಾತರಿಂದ ವ್ಯಾಪಾರಿ ಗಿರಿ ಅವರಿಗೆ ಸಾವಿರಾರು ರೂ. ನಷ್ಟ ಸಂಭವಿಸಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.