ಶಬರಿಮಲೆ: ಶಬರಿಮಲೆಯಲ್ಲಿ ಜನಸಂದಣಿ ನಿಯಂತ್ರಿಸಲಾಗದೆ ಸನ್ನಿಧಿಯ ಕೈಕಂಬ ಕುಸಿದಿದೆ. ಮೇಲ್ಸೇತುವೆಯಿಂದ ದೇಗುಲದ ಮುಂಭಾಗಕ್ಕೆ ಬರುವ ಕೈಕಂಬಕ್ಕೆ ಹಾನಿಯಾಗಿದೆ.
ಯಾತ್ರಿಕರ ನೂಕುನುಗ್ಗಲಿಗೆ ಕೈಕಂಬ ಕುಸಿದಿದೆ. ಕಂಬ ಮೊದಲೇ ದುರ್ಬಲವಾಗಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಮಕರ ಬೆಳಕು ಸಮೀಪಿಸುತ್ತಿದ್ದಂತೆ ಶಬರಿಮಲೆಯಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಇದನ್ನು ನಿಯಂತ್ರಿಸಲು ದೇವಸ್ವಂ ಮಂಡಳಿ ನಿಯಮಾವಳಿಗಳನ್ನು ತಂದಿತ್ತು. ಪೋಲೀಸರ ಸೂಚನೆ ಮೇರೆಗೆ ನಿರ್ಬಂಧ ಹೇರಲಾಗಿದೆ. ಇದಕ್ಕಾಗಿ ಸ್ಪಾಟ್ ಬುಕ್ಕಿಂಗ್ ಕೂಡ ನಿಬರ್ಂಧಿಸಲಾಗಿತ್ತು.
ಮಂಡಲ ಪೂಜೆಯ ಆರಂಭಕ್ಕೂ ಮುನ್ನ ಯಾತ್ರಾರ್ಥಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಸನ್ನದ್ಧವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಜನಜಂಗುಳಿಯಿಂದಾಗಿ ಈ ಬಾರಿ ದರ್ಶನಕ್ಕಾಗಿ ಎರುಮೇಲಿಯಿಂದ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇದನ್ನು ಅನುಸರಿಸಿ, ಮಕರ ಬೆಳಕಿನ ದಿನದಂದು ಜನಸಂದಣಿ ಕಡಿಮೆ ಮಾಡಲು ನಿಯಂತ್ರಣ ಹೇರಲಾಗಿದೆ.