ಪೆರ್ಲ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾಸಂಘ ಪೆರ್ಲ ಘಟಕದ ಮಹಿಳಾ ಸಂಘ ಹಾಗೂ ಉಪಸಮಿತಿಗಳ ನೇತೃತ್ವದಲ್ಲಿ ಶ್ರಮದಾನ ಕಾರ್ಯಕ್ರಮ ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ನಡೆಯಿತು.
ದೇವಸ್ಥಾನದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಸದಾನಂದ ಮಾಸ್ತರ್ ಕುದ್ವ ಶ್ರಮದಾನಕ್ಕೆ ಚಾಲನೆ ನೀಡಿದರು. ದೇವಸ್ಥಾನದಲ್ಲಿ ಫೆಬ್ರವರಿ 1ರಿಂದ 5ರ ತನಕ ವಾರ್ಷಿಕ ಜಾತ್ರೆ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಬಿಲ್ಲವ ಸಂಘದಿಂದ ಶ್ರಮದಾನ ನಡೆಸಲಾಗಿದೆ. ಸಂಘದ ಅಧ್ಯಕ್ಷ ಬಿ. ಪಿ. ಶೇಣಿ ಸ್ವಾಗತಿಸಿ, ಧನ್ಯವಾದವಿತ್ತರು.
ಶ್ರಮದಾನ ಕಾರ್ಯಕ್ರಮದಲ್ಲಿ ಸೇವಾಸಮಿತಿ ಸಂಚಾಲಕ ಗಿರಿಯಪ್ಪ ಪೂಜಾರಿ ಗುಂಡಿತ್ತಾರು, ಕ್ರೀಡಾ ಸಮಿತಿ ಸಂಚಾಲಕ ರಾಮಣ್ಣ ಪೂಜಾರಿ ಬಾಂಕಾನ, ಮಹಿಳಾ ಸಂಘ ಅಧ್ಯಕ್ಷೆ ರುಕ್ಮಿಣಿ ಬೆದ್ರಂಪಳ್ಳ, ಕಾರ್ಯದರ್ಶಿ ಸಹನಾ ರಘುರಾಮ್ ಪೆರ್ಲ, ಬಿಲ್ಲವ ಸಂಘ ಸಂಚಾಲಕ ಸಂಕಪ್ಪ ಪೂಜಾರಿ ಬಾಡೂರು, ಕೋಶಾಧಿಕಾರಿ ಪದ್ಮನಾಭ ಸುವರ್ಣ ಬಜಕೂಡ್ಲು, ಡಾ. ಕೃಷ್ಣಮೋಹನ ಬಜಕೂಡ್ಲು, ವಿವಿಧ ಉಪಸಮಿತಿ ಪದಾಧಿಕಾರಿಗಳಾದ ಕೃಷ್ಣಪ್ಪ ಮಾಸ್ಟರ್ ನಡುಬೈಲು, ಲೋಹಿತ್ ಮುಂಡಿತಡ್ಕ, ಮೋಹನ ಬೆದ್ರoಪಲ್ಲ, ಮಮತಾ ನಡುಬೈಲು,ಪುಷ್ಪಾ ಅರೆಮಂಗಿಲ, ಚಿತ್ರಾ ಅರೆಮಂಗಿಲ, ಸತೀಶ ನಡುಬೈಲು, ವಸಂತ ಶೇಣಿ, ಲಲಿತಾ ಸೋಮಾಜೆ, ಲಕ್ಷ್ಮಿ ಗೊಳಿತ್ತಾರು, ಲಲಿತಾ ಅರೆಮಂಗಿಲ, ರೋಹಿಣಿ ಬಜಕೂಡ್ಲು, ಯಶೋದಾ ಕಾನ, ಚಂಪಾವತಿ ಬಜಕೂಡ್ಲು, ಶಾರದಾ ನೆಕ್ಕರೆಪದವು, ಸುನೀತಾ ಬಾಂಕಾನ, ರಮೇಶ್ ನಡುಬೈಲು, ಅನನ್ಯ ಬಜಕೂಡ್ಲು, ಶ್ರೇಯಸ್ ಬಾಂಕಾನ, ಶಶಾಂಕ್ ಬಾಂಕಾನ, ಸ್ವರೂಪ್ ಅರೆಮಂಗಿಲ ಮೊದಲಾದವರು ಭಾಗವಹಿಸಿದ್ದರು.