ಕಾಸರಗೋಡು: ಎರಡು ದಶಕಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಆಂದೋಲನದಲ್ಲಿ ಸೇವೆ ಸಲ್ಲಿಸುತ್ತಿರುವ ಕೂಡ್ಲು ಎಸ್.ಜಿ.ಕೆ.ಎಚ್.ಎಸ್. ಶಾಲಾ ಸ್ಕೌಟ್ಸ್ ಶಿಕ್ಷಕ ಕಿರಣ್ ಪ್ರಸಾದ್ ಕೂಡ್ಲು ಅವರಿಗೆ ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುತ್ತಮ ಸೇವೆಗಾಗಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಮೆಡಲ್ ಆಫ್ ಮೆರಿಟ್‍ಗೆ ಭಾಜನರಾಗಿದ್ದಾರೆ. ಕಾಸರಗೋಡು ಜಿಲ್ಲಾ ಸಂಘದ ಜಂಟಿ ಕಾರ್ಯದರ್ಶಿಯಾಗಿರುವ ಇವರು ಹಲವಾರು ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯ ಸಂಘವು ನೀಡುವ ಅತ್ಯುನ್ನತ ಮನ್ನಣೆಯಾದ ಮೆಡಲ್ ಆಫ್ ಮೆರಿಟ್ ಪ್ರಶಸ್ತಿಯನ್ನು ನೀಡಿ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಗಣರಾಜ್ಯೋತ್ಸವದ ಜಿಲ್ಲಾ ಫರೇಡ್ ನಲ್ಲಿ ಗೌರವಿಸಿದರು.