ಕಾಸರಗೋಡು :ಚಿನ್ಮಯ ವಿದ್ಯಾಲಯವು ಅಜ್ಜ ಅಜ್ಜಿಯರ ದಿನಾಚರಣೆಯನ್ನು ಇತ್ತೀಚೆಗೆ ವರ್ಣರಂಜಿತ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಿತು.
ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮ ಅಕ್ಷರಶಃ ಶಾಲೆಯ ವಾತಾವರಣವನ್ನು ರೋಮಾಂಚನಗೊಳಿಸಿತು. ಸಮಾರಂಭದಲ್ಲಿ ಸುಮಾರು 100ಕ್ಕಿಂತ ಅಧಿಕ ಅಜ್ಜ ಅಜ್ಜಿಯರು ತಮ್ಮ ಮೊಮ್ಮಕ್ಕಳೊಂದಿಗೆ ಭಾಗವಹಿಸಿದರು. ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ತಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಮಕ್ಕಳ ಬೆಳವಣಿಗೆಯ ಮೇಲೆ ಬೀರುವ ಪ್ರಭಾವವನ್ನು ಪ್ರಸ್ತಾಪಿಸಿದರು.
ಕಾಸರಗೋಡು ಜಿಲ್ಲಾ ಪ್ರಸಿದ್ಧ ಸ್ತ್ರೀರೋಗ ತಜ್ಞೆ ಡಾ.ಯಶೋದಾ ರಾಘವನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ವಿದ್ಯಾಲಯದ ಪ್ರಾಂಶುಪಾಲ ಸುನೀಲ್ ಕುಮಾರ್ ಕೆ ಎಸ್, ಉಪ ಪ್ರಾಂಶುಪಾಲ ಪ್ರಶಾಂತ್ ಬಿ, ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮಾ ಎಸ್.ಆರ್ ಮತ್ತು ಸಿಂಧು ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನಿವೇದ್ಯ ವಾಮನ್ ಸ್ವಾಗತಿಸಿ, ಹೃತಿಕ ಸಿ ವಂದಿಸಿದರು. ವಿವಿಧ ಸಾಂಸ್ಕøತಿಕ ಸ್ಪರ್ಧೆಗಳು ಕಾರ್ಯಕ್ರಮವನ್ನು ವರ್ಣರಂಜಿತಗೊಳಿಸಿದವು. ಸ್ಪರ್ಧೆಗಳಲ್ಲಿ ವಿಜೇತರಾದ ಅಜ್ಜ ಅಜ್ಜಿಯಂದಿರಿಗೆ ಬಹುಮಾನಗಳನ್ನು ವಿತರಿಸಲಾಯಿತು.