ಕಾಸರಗೋಡು: ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ವಿವಿಧೆಡೆ ಕರೆದೊಯ್ದು ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಉಪ್ಪಳ ನಿವಾಸಿ ನವಾಸ್(24)ಎಂಬಾತನ ವಿರುದ್ಧ ಚಂದೇರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
2023ರ ಜುಲೈ 28ರಂದು ಮುನ್ನಾರ್‍ನಲ್ಲಿ, ಸೆಪ್ಟಂಬರ್ ತಿಂಗಳಲ್ಲಿ ಬೇಕಲ ಪಳ್ಳಿಕೆರೆಯ ಖಾಸಗಿ ವ್ಯಕ್ತಿಯ ಮಾಲಿಕತ್ವದ ಸ್ಥಳದಲ್ಲಿ ಕಿರುಕುಳ ನೀಡಿರುವುದಾಗಿ ಯುವತಿ ನೀಡಿರುವ ದೂರಿನನ್ವಯ ಈ ಕೇಸು ದಾಖಲಾಗಿದೆ. ಈ ಹಿಂದೆ ಕಿರುತೆರೆ ಧಾರವಾಹಿಗಳಲ್ಲಿ ಅಭಿನಯಿಸಿದ್ದ ಯುವತಿಯನ್ನು ಸಿನಿಮಾದಲ್ಲಿ ಅವಕಾಶಮಾಡಿಕೊಡುವುದಾಗಿ ತಿಳಿಸಿ, ಪ್ರವಾಸಿ ತಾಣ ಸಹಿತ ಹಲವೆಡೆ ಕರೆದೊಯ್ದು ಕಿರುಕುಳ ನೀಡಿದ್ದು, ನಂತರ ತಲೆಮರೆಸಿಕೊಂಡಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾಲೆ.ಬೇಕಲ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ಪ್ರಕರಣವನ್ನು ಅಲ್ಲಿನ ಠಾಣೆಗೆ ಹಸ್ತಾಂತರಿಸಲಾಗಿದೆ.