ಕಾಸರಗೋಡು: ನಗರಸಭೆ, ಜನರಲ್ ಆಸ್ಪತ್ರೆ ಸೆಕ್ಟೋರಲ್ ಪ್ಯಾಲಿಯೇಟಿವ್ ಕೇರ್ ಕೇಂದ್ರಗಳ ಜಂಟಿ ಸಹಯೋಗದೊಂದಿಗೆ ಪ್ಯಾಲಿಯೇಟಿವ್ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಜಾಗೃತಿ ಜಾಥಾ, ಪ್ಲ್ಯಷ್‍ಮೋಬ್ ಜರುಗಿತು.
ನಗರಸಭೆಯ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ಜನರಲ್ ಆಸ್ಪತ್ರೆ ಉಪ ಅಧೀಕ್ಷಕ ಡಾ.ಜಮಾಲ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಡಾ.ಜನಾರ್ದನ ನಾಯ್ಕ್, ಡಾ.ಜಾಹೀರ್ ಅಹಮದ್, ಡಾ. ಶೆಮಿರಾ, ಡಾ.ರಿಯಾಜ್ ಮೊದಲಾದವರು ಪಾಲ್ಗೊಂಡಿದ್ದರು.