ಕಾಸರಗೋಡು: ಜಿಲ್ಲೆಯ ನಗರಸಭಾ ಸ್ಟೇಡಿಯಂನಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಸಚಿವೆ ಡಾ.ಆರ್.ಬಿಂದು ಧ್ವಜಾರೋಹಣ ನಡೆಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಈ ಸಂದರ್ಭ ನಡೆಯುವ ಪಥಸಂಚಲನದಲ್ಲಿ ಪೊಲೀಸ್, ಸಶಸ್ತ್ರ ಪಡೆ, ಅಬಕಾರಿ ಸೇರಿದಂತೆ ವಿವಿಧ ಪಡೆಗಳ 20 ತುಕಡಿಗಳು ಪಾಲ್ಗೊಳ್ಳಲಿದೆ.
ಚಿತ್ರ: ಗಣರಾಜ್ಯೋತ್ಸವ ಅಂಗವಾಗಿ ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿರುವ ವಿವಿಧ ತಂಡಗಳು ಪೂರ್ವಭಾವಿ ಕವಾಯತು ನಡೆಸಿತು.