ಕೆಲವೊಂದಿಷ್ಟು ಕಾಯಿಲೆಗಳಿಗೆ ಪದೇ ಪದೇ ಆಸ್ಪತ್ರೆಗೆ ಹೋಗಿ ಔಷಧಿ ಸೇವನೆ ಮಾಡುವುದಕ್ಕಿಂತ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿಕೊಂಡು ಮನೆ ಮದ್ದು ತಯಾರಿಸಿಕೊಳ್ಳಬಹುದು. ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುವುದರಿಂದ, ನಾವು ಅಂತಹ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು.
ನುಗ್ಗೆ ಹೂವಿನ ಪಲ್ಯ! ನುಗ್ಗೆಕಾಯಿ, ನುಗ್ಗೆ ಸೊಪ್ಪು ಆರೋಗ್ಯಕ್ಕೆ ಎಷ್ಟು ಪರಿಣಾಮಕಾರಿಯಾಗಿರುವ ಆಹಾರ ಎಂಬುದು ಎಲ್ಲರಿಗೂ ಗೊತ್ತು. ನುಗ್ಗೆ ಸೊಪ್ಪಿನ ಪಲ್ಯ ಅಥವಾ ಸಾಂಬಾರ್ ಮಾಡಿಕೊಂಡು ಸೇವಿಸಿದರೆ ಮದುವೆಯ ನಿಯಂತ್ರಣಕ್ಕೆ ಬರುತ್ತದೆ. ಅದೇ ರೀತಿ ಪುರುಷತ್ವ ಹೆಚ್ಚಿಸಲು ಕೂಡ ನುಗ್ಗೆಕಾಯಿ ಸಹಾಯಕವಾಗಿದೆ. ಅದೇ ರೀತಿ ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಬಿ 6, ಕ್ಯಾಲ್ಸಿಯಂ, ಕಬ್ಬಿಣ ಅಂಶಗಳು ಹೇರಳವಾಗಿರುವ ನುಗ್ಗೆ ಹೂವು ಕೂಡ ಆರೋಗ್ಯಕ್ಕೆ ಬಹಳ ಪರಿಣಾಮಕಾರಿಯಾಗಿರುವ ಆಹಾರ ಪದಾರ್ಥವಾಗಿದೆ.ನುಗ್ಗೆ ಹೂವಿನ ಪಲ್ಯ ಮಾಡಲು ಬೇಕಾಗಿರುವ ವಸ್ತುಗಳು! ನುಗ್ಗೆ ಹೂವು ಒಂದು ಬೌಲ್ ನಷ್ಟು (ಅಥವಾ ಮನೆಯಲ್ಲಿ ಎಷ್ಟು ಜನ ಇದ್ದಾರೋ ಅಷ್ಟು ಜನರಿಗೆ ಸಾಕಾಗುವಷ್ಟು) ಈರುಳ್ಳಿ ಎರಡರಿಂದ ಮೂರು) ತೆಂಗಿನ ತುರಿ ಎರಡು ದೊಡ್ಡ ಚಮಚ ಅಡುಗೆ ಎಣ್ಣೆ ಒಂದು ದೊಡ್ಡ ಚಮಚ ಹಸಿಮೆಣಸಿನಕಾಯಿ 3 ರಿಂದ 4 (ಖಾರಕ್ಕೆ ಅನುಗುಣವಾಗಿ) ಕರಿಬೇವಿನ ಸೊಪ್ಪು 5 ರಿಂದ 10 ಎಲೆಗಳು ಉಪ್ಪು ರುಚಿಗೆ ತಕ್ಕಷ್ಟು ಹುಣಸೆ ಪುಡಿ ಅಥವಾ ಹುಣಸೆಹಣ್ಣು ಸ್ವಲ್ಪ ಒಗ್ಗರಣೆಗೆ ಸಾಸಿವೆ ಮತ್ತು ಜೀರಿಗೆ (ಒಣ ಮೆಣಸು ಬೇಕಿದ್ದವರು ಬಳಸಬಹುದು)
ನುಗ್ಗೆ ಸೊಪ್ಪಿನ ಪಲ್ಯ ಮಾಡುವ ವಿಧಾನ! ಮೊದಲಿಗೆ ನುಗ್ಗೆ ಸೊಪ್ಪನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಒಂದು ಪಾತ್ರೆಗೆ ನೀರು ಉಪ್ಪು ಹಾಗೂ ಅರಿಶಿಣ ಹಾಕಿ, ಐದು ನಿಮಿಷಗಳ ಕಾಲ ನೆನೆಸಿಟ್ಟುಕೊಳ್ಳಿ. ಯಾವುದೇ ಕ್ರಿಮಿ ಕೀಟಗಳು ಇದ್ರೆ ಹೋಗಲಿ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ.
ಇನ್ನು ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ ಬಿಸಿಗೆ ಇಡಿ. ಎಣ್ಣೆ ಬಿಸಿಯಾದ ನಂತರ ಅದಕ್ಕೆ ಸಾಸಿವೆ ಹಾಗೂ ಜೀರಿಗೆ ಹಾಕಿ ಚಟಪಟ ಆದ ತಕ್ಷಣ, ಕರಿಬೇವನ್ನು ಹಾಕಿ. ಹೆಚ್ಚಿಟ್ಟುಕೊಂಡಿರುವ ಹಸಿಮೆಣಸಿನಕಾಯಿ ಸೇರಿಸಿ. ಹಸಿ ಮೆಣಸಿನ ಬದಲು ಒಣ ಮೆಣಸು ಸೇರಿಸಬಹುದು. ಈಗ ಸ್ವಲ್ಪ ಹುರಿದು ಎತ್ತಿಟ್ಟುಕೊಂಡ ಈರುಳ್ಳಿಯನ್ನು ಸೇರಿಸಿ. ಈರುಳ್ಳಿಯನ್ನು ಸ್ವಲ್ಪ ಹೊಂಬಣ್ಣಕ್ಕೆ ಬರುವವರೆಗೆ ಬೇಯಿಸಿ. ನುಗ್ಗೆ ಹೂವುಗಳನ್ನು ನೀರನ್ನು ಬಸಿದು, ಸೇರಿಸಿ. ಬಳಿಕ ಹೂವನ್ನು ಮೊಗಚಿ. ಚಿಟಿಕೆ ಅರಿಶಿಣ ಹಾಗೂ ಉಪ್ಪನ್ನು ಸೇರಿಸಿ ಬೇಯಲು ಬಿಡಿ.
ನುಗ್ಗೆ ಹೂವಿನ ಪಲ್ಯ ಫ್ರೈ ಮಾಡುವಾಗ ನೀರನ್ನು ಸೇರಿಸಬಾರದು. ಯಾಕೆಂದರೆ ನುಗ್ಗೆ ಹೂವು ಸ್ವಲ್ಪ ಕಹಿಯಾಗಿರುತ್ತದೆ ಹಾಗಾಗಿ ನೀರು ಸೇರಿಸದೆ ಎಣ್ಣೆಯಲ್ಲಿಯೇ ಫ್ರೈ ಮಾಡಿದರೆ ಒಳ್ಳೆಯದು. ಈರುಳ್ಳಿ ಹಾಕುವುದರಿಂದ ನುಗ್ಗೆ ಹೂವಿನ ಹಸಿ ವಾಸನೆ ಹೋಗುತ್ತದೆ.
ನುಗ್ಗೆ ಹೂವು ಚೆನ್ನಾಗಿ ಬೆಂದ ನಂತರ, ಕೊನೆಯಲ್ಲಿ ಕಾಯಿತುರಿಯನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಗ್ಯಾಸ್ ಆಫ್ ಮಾಡಿ. ಬಿಸಿ ಬಿಸಿ ಅನ್ನದ ಜೊತೆಗೆ ಅಥವಾ ಚಪಾತಿ ಜೊತೆಗೆ ಈ ಪಲ್ಯವನ್ನು ಸೇವಿಸಿ. ವರ್ಷಪೂರ್ತಿ ಈ ನುಗ್ಗೆ ಹೂವು ಸಿಗುವುದಿಲ್ಲ ಹಾಗಾಗಿ ಸಿಕ್ಕ ಸಮಯದಲ್ಲಿ ತಪ್ಪದೇ ಇದರಿಂದ ಆಹಾರ ತಯಾರಿಸಿಕೊಂಡು ಸೇವನೆ ಮಾಡಿ.
ನುಗ್ಗೆ ಹೂವು ಚೆನ್ನಾಗಿ ಬೆಂದ ನಂತರ, ಕೊನೆಯಲ್ಲಿ ಕಾಯಿತುರಿಯನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಗ್ಯಾಸ್ ಆಫ್ ಮಾಡಿ. ಬಿಸಿ ಬಿಸಿ ಅನ್ನದ ಜೊತೆಗೆ ಅಥವಾ ಚಪಾತಿ ಜೊತೆಗೆ ಈ ಪಲ್ಯವನ್ನು ಸೇವಿಸಿ. ವರ್ಷಪೂರ್ತಿ ಈ ನುಗ್ಗೆ ಹೂವು ಸಿಗುವುದಿಲ್ಲ ಹಾಗಾಗಿ ಸಿಕ್ಕ ಸಮಯದಲ್ಲಿ ತಪ್ಪದೇ ಇದರಿಂದ ಆಹಾರ ತಯಾರಿಸಿಕೊಂಡು ಸೇವನೆ ಮಾಡಿ.