ಕಾಸರಗೋಡು: ಪೈವಳಿಕೆಯ ಅಲ್ ಜಾಮಿಅತುಲ್ ಅನ್ಸಾರಿಯ್ಯಾ ಅಲ್ ಇಸ್ಲಾಮಿಯ್ಯಾ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿ ಹದಿನಾರನೇ ವಾರ್ಷಿಕ ಹಾಗೂ ಎರಡನೇ ಸನದುದಾನ ಮಹಾ ಸಮ್ಮೇಳನ ಪೈವಳಿಕೆ ಮದೀನಾ ಗಾರ್ಡನ್ ನಲ್ಲಿ ಜನವರಿ 11ರಿಂದ 13ರ ವರೆಗೆ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ. 11ರಂದು ಸಂಜೆ 4 ಕ್ಕೆ ಪಯ್ಯಕ್ಕಿ ಉಸ್ತಾದ್ ಮಖಾಂ ಝಿಯಾರತಿಗೆ ಕುಂಬೋಲ್ ಸಯ್ಯದ್ ಅಲಿ ತಂಙಳ್ ನೇತೃತ್ವ ನೀಡಲಿದ್ದಾರೆ. ಪ್ರಮುಖ 5 ವಿಷಯಗಳನ್ನೊಳಗೊಂಡ ಅಲ್ ಅನ್ಸಾರ್ ಸ್ಮರಣಸಂಚಿಕೆ ಬಿಡುಗಡೆಗೊಳ್ಳಲಿದೆ. ಪಯ್ಯಕ್ಕಿ ಮಸೀದಿ ಪರಿಸರದಿಂದ ಅಕಾಡೆಮಿ ಕ್ಯಾಂಪಸ್ ತನಕ ಘೋಷಣಾ ಜಾಥಾ ನಡೆಯಲಿದೆ.
ಸಂಸ್ಥೆಯ ಪ್ರಾಂಶುಪಾಲ ತೊಟ್ಟಿ ಮಾಹಿನ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ. 7 ಗಂಟೆಗೆ ನಡೆಯುವ ಉಧ್ಘಾಟನಾ ಸಮಾರಂಭದಲ್ಲಿ ಪಾಣಕ್ಕಾಡ್ ಸಯ್ಯದ್ ಮುನವ್ವರಲಿ ಶಿಹಾಬ್ ತಂಙಳ್ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭ ವಲಿಯ್ಯುದ್ದೀನ್ ಫೈಝಿ ನೇತೃತ್ವದಲ್ಲಿ ನೂರೇ ಅಜ್ಮೀರ್ ಆತ್ಮೀಯ ಸಂಗಮ ನಡೆಯಲಿದೆ.
ಜ. 12ರಂದು ಮಧ್ಯಾಹ್ನ 3ಕ್ಕೆ ನಡೆಯುವ ಪ್ರವಾಸಿ ಸಂಗಮ ಸಯ್ಯಿದ್ ಸೈಫುಲ್ಲಾ ತಂಙಳ್ ಉದ್ಘಾಟಿಸಲಿದ್ದಾರೆ, ಸಂಜೆ 4ಕ್ಕೆ ಅಝೀಝ್ ಮರಿಕೆ ಅಧ್ಯಕ್ಷತೆಯಲ್ಲಿ ನಡೆಯುವ ಸ್ನೇಹ ಸಂಗಮವನ್ನು ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕರಾದ ಎಕೆಎಂ ಅಶ್ರಫ್, ಸಿ ಎಚ್ ಕುಂಞಂಬು, ಫಾದರ್ ಬೇಝಿಲ್ ವಾಸ್, ಎಸ್ ಪ್ರದೀಪ್ ಕುಮಾರ್, ಅತಿಥಿಗಳಾಗಿ ಭಾಗವಹಿಸುವರು.
13ರಂದು ಬೆಳಗ್ಗೆ 10ಕ್ಕೆ ನಡೆಯುವ ವಿಧ್ಯಾರ್ಥಿ ಯುವಜನ ಸಂಗಮ ಸಯ್ಯಿದ್ ಮುಬಶ್ಶಿರ್ ಜಮಲುಲ್ಲೈಲಿ ತಂಙಳ್ ಉದ್ಘಾಟಿಸುವರು. ನಂತರ ನಡೆಯುವ ಉಲಮಾ ಉಮರಾ ಸಂಗಮ ಪ್ರಾಂಶುಪಾಲರಾದ ತೊಟ್ಟಿ ಮಾಹಿನ್ ಮುಸ್ಲಿಯಾರ್ ಉದ್ಘಾಟಿಸುವರು.
ಸಂಜೆ 7ಕ್ಕೆ ನಡೆಯುವ ಸಮಾರೋಪ ಸಮಾರಂಭ ಪಾಣಕ್ಕಾಡ್ ಸಯ್ಯದ್ ಸ್ವಾದಿಖಲಿ ಶಿಹಾಬ್ ತಂಙಳ್ ಉದ್ಘಾಟಿಸುವರು. ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ . ಸನದುದಾನ ಮತ್ತು ಸನದುದಾನ ಭಾಷಣ ನಡೆಸುವರು. ಸಮಸ್ತ ಪ್ರಧಾನ ಕಾರ್ಯದರ್ಶಿ ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್, ಕೋಶಾಧಿಕಾರಿ ಕೋಯಿಕ್ಕೋಡ್ ಉಮರ್ ಮುಸ್ಲಿಯಾರ್, ಯು ಎಂ ಅಬ್ದುರ್ರಹ್ಮಾನ್ ಮುಸ್ಲಿಯಾರ್, ತ್ವಾಖ ಅಹ್ಮದ್ ಮುಸ್ಲಿಯಾರ್, ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮೊದಲಾದವರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಹನೀಫ್ ಹಾಜಿ, ಅಜೀಜ್ ಮರಿಕೆ, ಸ್ವಾಲಿಹ್ ಹಾಜಿ, ಸ್ವಾಗತ ಸಮಿತಿ ಸಂಚಾಲಕ ಕಜೆ ಮುಹಮ್ಮದ್ ಫೈಝಿ, ಮುಹಮ್ಮದ್‍ಕುಞÂ ಪೈವಳಿಕೆ ಉಪಸ್ಥಿತರಿದ್ದರು.