ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತಿ, ಕುಟುಂಬ ಆರೋಗ್ಯ ಕೇಂದ್ರ ಹಾಗೂ ಕುಟುಂಬ ಕಲ್ಯಾಣ ಉಪಕೇಂದ್ರ ಜಂಟಿಯಾಗಿ ನೇತ್ರ ರೋಗ ತಪಾಸಣಾ ಶಿಬಿರ ಹಾಗೂ ಜೀವನಶೈಲಿ ರೋಗ ತಪಾಸಣಾ ಶಿಬಿರವನ್ನು 6ನೇ ವಾರ್ಡ್ ಕಜೆ ಸಮುದಾಯ ಭವನದಲ್ಲಿ ಶನಿವಾರ ಯಶಸ್ವಿಯಾಗಿ ಆಯೋಜಿಸಿತ್ತು. ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸೋಳಿಗೆ ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ.ಕೆ.ಎಸ್.ಸೈಯದ್ ಹಮೀದ್ ಶುಹೈಬ್ ಅಧ್ಯಕ್ಷತೆ ವಹಿಸಿದ್ದರು. ನೇತ್ರತಜ್ಞ ಆದರ್ಶ ತರಗತಿ ನಡೆಸಿದರು. ಕಿರಿಯ ಆರೋಗ್ಯ ನಿರೀಕ್ಷಕ ಜಿಜು ಮಾರ್ಕೋಸ್ ಹಾಗೂ ಎಂಎಲ್ ಎಸ್ ಪಿ ಅನಸೂಯಾ ಮಾತನಾಡಿದರು. ಆಶಾ ಕಾರ್ಯಕರ್ತೆ ಯಮುನಾ ಸ್ವಾಗತಿಸಿ, ಜೆ.ಎಚ್.ಐ.ಕೆ.ರಾಜೇಶ್ ವಂದಿಸಿದರು.