ತೈಪೆ: ಚೀನಾದ ತೀವ್ರ ವಿರೋಧದ ನಡುವೆ ತೈವಾನ್ ನೂತನ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪ್ರೋಗ್ರೆಸ್ಸೀವ್ ಪಕ್ಷದ ಲಾಯ್ ಚಿಂಗ್ ಟೆ ಶನಿವಾರ ಆಯ್ಕೆಯಾಗಿದ್ದಾರೆ.
ತೈಪೆ: ಚೀನಾದ ತೀವ್ರ ವಿರೋಧದ ನಡುವೆ ತೈವಾನ್ ನೂತನ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪ್ರೋಗ್ರೆಸ್ಸೀವ್ ಪಕ್ಷದ ಲಾಯ್ ಚಿಂಗ್ ಟೆ ಶನಿವಾರ ಆಯ್ಕೆಯಾಗಿದ್ದಾರೆ.
ಅಂತಿಮ ಮತ ಎಣಿಕೆಯ ನಂತರ ಕೇಂದ್ರ ಚುನಾವಣಾ ಆಯೋಗವು ಲಾಯ್ ಚಿಂಗ್ ಟೆ ಶೇ 40.1 ಮತ ಗಳಿಸಿ ವಿಜಯ ಸಾಧಿಸಿದ್ದಾರೆ ಎಂದು ಘೋಷಿಸಿತು.
ಲಾಯ್, ಚೀನಾ ಬೆದರಿಕೆ ಮತ್ತು ಎಚ್ಚರಿಕೆಗಳನ್ನು ಬದಿಗೊತ್ತಿ 'ತೈವಾನ್ ಪ್ರಜಾಪ್ರಭುತ್ವದಲ್ಲಿ ಹೊಸ ಅಧ್ಯಾಯ ಬರೆದದ್ದಕ್ಕಾಗಿ' ಜನರಿಗೆ ಧನ್ಯವಾದ ತಿಳಿಸಿದರು.
ಗೆಲುವಿನ ನಂತರ ಮಾತನಾಡಿದ ಲಾಯ್, ತಾವು ತೈವಾನ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವುದಾಗಿ ತಿಳಿಸಿದರು. ಆದರೆ, ಚೀನಾದ ಬೆದರಿಕೆಗಳಿಂದ ತೈವಾನ್ ಅನ್ನು ಪಾರು ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ಮತದಾನಕ್ಕೆ ಮುನ್ನ ಲಾಯ್ ಅವರನ್ನು ಬೀಜಿಂಗ್ 'ತೀವ್ರ ಅಪಾಯಕಾರಿ' ಎಂದು ಕರೆದು, ಅವರನ್ನು ಸೋಲಿಸುವಂತೆ ಜನರಿಗೆ ಕರೆ ಕೊಟ್ಟಿತ್ತು. ಶನಿವಾರದ ಚುನಾವಣಾ ಫಲಿತಾಂಶವು ಚೀನಾದ ಪುನರ್ ಮಿಲನವನ್ನು ತಡೆಯಲಾಗದು ಎಂದು ಚೀನಾ ಹೇಳಿತ್ತು.