ಮಂಜೇಶ್ವರ : ಕೊಡ್ಲಮೊಗರು ಸಮೀಪದ ಅಂಗನಿಮಾರು ನೂಜಿ ಶ್ರೀ ಕಡಂಗಲ್ಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ನೇಮೋತ್ಸವವು ಮಾರ್ಚ್ 22 ರಂದು ಜರಗಲಿದ್ದು, ಮಕರ ಸಂಕ್ರಮಣ ಆಚರಣೆಯಂದು ವμರ್Áವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಪವಿತ್ರಪಾಣಿ ಬೀಡು ಕುಶಲ ಕುಮಾರ ಪಾತೂರಾಯರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ದೈವ ನರ್ತಕ ಗಣೇಶ್ ಬಾಯಾರು, ಆಡಳಿತ ಸಮಿತಿ ಸದಸ್ಯರು, ಸೇವಾ ಸಮಿತಿ ಸದಸ್ಯರು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು. ಮಾರ್ಚ್ 13 ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಮಾರ್ಚ್ 22 ರಂದು ಶ್ರೀ ದೈವಗಳ ವμರ್Áವಧಿ ನೇಮೋತ್ಸವವು ಜರಗಲಿರುವುದು.