HEALTH TIPS

ಸೋಂಕಾಲು ಜಂಕ್ಷನ್‍ನಲ್ಲಿ ಹೆಚ್ಚುತ್ತಿರುವ ಅಪಘಾತ : ಹಂಪ್ ನಿರ್ಮಿಸಲು ಆಗ್ರಹ

               ಉಪ್ಪಳ: ಕೈಕಂಬ - ಬಾಯಾರು ರಸ್ತೆಯ ಸೋಂಕಾಲು ಜಂಕ್ಷನ್‍ನಲ್ಲಿ ವಾಹನಗಳ ಅಪಘಾತ ಹೆಚ್ಚುತ್ತಿದ್ದು, ಊರವರನ್ನು ಆತಂಕಕ್ಕೀಡು ಮಾಡಿದೆ. ದಿನಗಳ ಹಿಂದೆ ಸ್ಕೂಟರ್‍ಗೆ ಕಾರು ಡಿಕ್ಕಿ ಹೊಡೆದು ಕುಳೂರು ಉಮಿಕಳ ನಿವಾಸಿ ಮೊಹಮ್ಮದ್ ಹನೀಫ್ ಮೃತಪಟ್ಟಿದ್ದರಲ್ಲದೆ ಈ ಹಿಂದೆ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ಪುಳಿಕುತ್ತಿಯಲ್ಲಿ ವಾಸವಾಗಿರುವ ವೆಂಕಟ್ರಮಣ ಆಚಾರ್ಯ ಹಾಗೂ ಸ್ಕೂಟರ್ ಕಾರು ಡಿಕ್ಕಿಯಾಗಿ ಯುವಕನೋರ್ವ ಮೃತಪಟ್ಟ ಘಟನೆ ಸಂಭವಿಸಿತ್ತು. 

             ಅಲ್ಲದೆ ಪದೇ ಪದೇ ಸಣ್ಣಪುಟ್ಟ ಅಪಘಾತಗಳು ನಡೆದು ಹಲವು ಮಂದಿ ಗಾಯಗೊಂಡ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಸೋಂಕಾಲಿನಿಂದ ಕೊಡಂಗೆ - ಪ್ರತಾಪನಗರ ರಸ್ತೆಗೆ ಸಂಗಮಿಸುವ ಪರಿಸರದ ರಸ್ತೆಯಲ್ಲಿ ಹಂಪ್ ಸ್ಥಾಪಿಸಿ ವಾಹನಗಳ ವೇಗವನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಕೆ.ಪಿ.ವಲ್ಸರಾಜ್ ಅವರ ನೇತೃತ್ವದಲ್ಲಿ ಊರವರು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರಿಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ. 

            ಈ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.  ಸೋಂಕಾಲು ಜಂಕ್ಷನ್ ದಿನನಿತ್ಯ ಜನನಿಬಿಡ ಪ್ರದೇಶವಾಗಿದ್ದು , ವಾಹನಗಳು ಅಪಾರ ವೇಗದಲ್ಲಿ ಸಂಚರಿಸುವುದರಿಂದ ರಸ್ತೆ ದಾಟಲು ಭಾರೀ ಸಮಸ್ಯೆ  ತಲೆದೋರುತ್ತಿದೆ. ಬಾಯಾರಿನಿಂದ ಕೈಕಂಬ ತನಕ ರಸ್ತೆಗೆ ಮರು ಡಾಮರೀಕರಣ ನಡೆಸಲಾಗುತ್ತಿದೆ. ಈ ವೇಳೆ ವಿವಿಧೆಡೆಗಳ ರಸ್ತೆ ಹಂಪ್‍ಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಅದೇ ಸ್ಥಳಗಳಲ್ಲಿ ಮತ್ತೆ ಹಂಪ್‍ಗಳನ್ನು ಸ್ಥಾಪಿಸಿ ಅಪಘಾತಗಳನ್ನು ತಪ್ಪಿಸಬೇಕೆಂದು ಸಾರ್ವಜನಿಕ  ವಲಯ ಆಗ್ರಹಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries