ಇಡುಕ್ಕಿ: ಹರತಾಳ ನೆಪದಲ್ಲಿ ರಾಜ್ಯಪಾಲರನ್ನು ಪರಾಭವಗೊಳಿಸಬಹುದು ಎಂದುಕೊಂಡಿದ್ದ ಸಿಪಿಎಂಗೆ ಹಿನ್ನಡೆಯಾಗಿದೆ. ರಾಜ್ಯಪಾಲರು ಇಂದು ಇಡುಕ್ಕಿಯಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕಾರುಣ್ಯಂ ಯೋಜನೆಯನ್ನು ಉದ್ಘಾಟಿಸಿದರು.
ಕಾರ್ಯಕ್ರಮ ತೊಡುಪುಳದಲ್ಲಿ ನಡೆಯಿತು. ವ್ಯಾಪಾರಿ ಸಂಘಟನೆ ಪದಾಧಿಕಾರಿಗಳು ಹೂ ಹಾರ ಹಾಕಿ ರಾಜ್ಯಪಾಲರನ್ನು ಸ್ವಾಗತಿಸಿದರು.
ಜಿಲ್ಲಾ ಗಡಿಯಿಂದ ತೊಡುಪುಳದವರೆಗೆ ರಾಜ್ಯಪಾಲರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು. ಡಿವೈಎಫ್‍ಐ, ಎಸ್‍ಎಫ್‍ಐ ಹಾಗೂ ಯೂತ್ ಪ್ರಂಟ್ ಎಂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಅಠಕವಲ, ವೆಂಗಲ್ಲೂರು ಮತ್ತು ಶಪ್ಪುಪಾಡಿಯಲ್ಲಿ ರಾಜ್ಯಪಾಲರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಪೋಲೀಸರ ಉಪಸ್ಥಿತಿಯಲ್ಲಿ ಕಪ್ಪು ಬಾವುಟ ಪ್ರದರ್ಶನ ನಡೆಯಿತು.
ಸಿಪಿಎಂ, ಎಸ್‍ಎಫ್‍ಐ ಕಾರ್ಯಕರ್ತರು ಬೆಳಗ್ಗೆಯಿಂದಲೇ ಘೋಷಣೆ ಮೊಳಗಿಸುತ್ತಾ ನಗರದಲ್ಲಿ ಬೀಡು ಬಿಟ್ಟಿದ್ದರೂ ಎಲ್ಲವೂ ವ್ಯರ್ಥವಾಯಿತು. ಎಸ್‍ಎಫ್‍ಐ ಕಾರ್ಯಕರ್ತರನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.