ಮುಂಬೈ: ಕೋವಿಡ್ ಸಾಂಕ್ರಮಿಕದ ವೇಳೆ ನಡೆದಿದೆ ಎನ್ನಲಾದ 'ಖಿಚಡಿ' ಹಗರಣದಲ್ಲಿ ಶಿವಸೇನಾ (ಯುಟಿಬಿ) ನಾಯಕ ಆದಿತ್ಯ ಠಾಕ್ರೆ ಅವರ ಆಪ್ತ ಸೂರಜ್ ಚವಾಣ್ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ.
ಮುಂಬೈ: ಕೋವಿಡ್ ಸಾಂಕ್ರಮಿಕದ ವೇಳೆ ನಡೆದಿದೆ ಎನ್ನಲಾದ 'ಖಿಚಡಿ' ಹಗರಣದಲ್ಲಿ ಶಿವಸೇನಾ (ಯುಟಿಬಿ) ನಾಯಕ ಆದಿತ್ಯ ಠಾಕ್ರೆ ಅವರ ಆಪ್ತ ಸೂರಜ್ ಚವಾಣ್ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ.
ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದ ಮಹಾ ವಿಕಾಸ ಅಘಾಡಿ ಸರ್ಕಾರದ ಅವಧಿಯಲ್ಲಿ ಈ ಹಗರಣ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆದಿತ್ಯ ಠಾಕ್ರೆ, 'ನಾಚಿಕೆಯಿಲ್ಲದ ಸರ್ವಾಧಿಕಾರಗಳಿಗೆ ಮತ್ತು ಅವರ ಸೇವಾ ಸಂಸ್ಥೆಗಳಿಗೆ ತಲೆಬಾಗದ ಇಂತಹ ದೇಶಭಕ್ತರ ಸಹೋದ್ಯೋಗಿಯಾಗಲು ಹೆಮ್ಮೆಪಡುತ್ತೇನೆ' ಎಂದು ಹೇಳಿದ್ದಾರೆ.
ಚವಾಣ್ ಯಾವಾಗಲೂ ಸತ್ಯ, ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಮತ್ತು ನಮ್ಮ ಸಂವಿಧಾನದ ಪರವಾಗಿ ನಿಂತಿದ್ದರು ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಮಾರಾಟವಾಗಲು ಅವರು ನಿರಾಕರಿಸಿದರು. ಹೀಗಾಗಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ನಾವು ಪ್ರಜಾಪ್ರಭುತ್ವಕ್ಕಾಗಿ ಈ ಕರಾಳ ದಿನಗಳಲ್ಲಿ ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ. ನಮ್ಮ ರಾಜ್ಯದಲ್ಲಿ ಸರ್ವಾಧಿಕಾರಿ ಆಡಳಿತವನ್ನು ಜಗತ್ತೇ ನೋಡುತ್ತಿದೆ ಎಂದು ಏಕನಾಥ ಶಿಂದೆ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಚವಾಣ್ ಅವರ ಬಂಧನವನ್ನು ನಾನು ಸ್ವಾಗತಿಸುತ್ತೇನೆ ಎಂದು ಈ ಹಗರಣದ ಬಗ್ಗೆ ಧ್ವನಿ ಎತ್ತಿದ್ದ ಬಿಜೆಪಿ ನಾಯಕ ಕಿರಿತ್ ಸೋಮನಿಯಾ ಹೇಳಿದ್ದಾರೆ.