HEALTH TIPS

ಭಾರತ, ಫ್ರಾನ್ಸ್‌, ಯುಎಇ ಸಮರಾಭ್ಯಾಸ

             ವದೆಹಲಿ: ಭಾರತ, ಫ್ರಾನ್ಸ್ ಮತ್ತು ಯುಎಇ ದೇಶಗಳು ಒಟ್ಟಾಗಿ ಅರಬ್ಬಿ ಸಮುದ್ರದ ವಾಯುಪ್ರದೇಶದಲ್ಲಿ ಬೃಹತ್ ಸಮರಾಭ್ಯಾಸ ನಡೆಸಿವೆ. ಹುತಿ ಬಂಡುಕೋರರು ಈ ಪ್ರದೇಶದ ಕೆಲವು ಜಲಮಾರ್ಗಗಳಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ದಾಳಿ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿರುವ ಹೊತ್ತಿನಲ್ಲಿ ಈ ಸಮರಾಭ್ಯಾಸ ನಡೆದಿದೆ.

             ಮೂರು ದೇಶಗಳ ಸಮರಾಭ್ಯಾಸವು ಮಂಗಳವಾರ ನಡೆದಿದೆ. ಇದರಲ್ಲಿ ಮೂರೂ ದೇಶಗಳ ವಾಯುಪಡೆಗಳ ಯುದ್ಧ ವಿಮಾನಗಳು ಭಾಗಿಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ವಾಯುಪಡೆಯ ಸು-30 ಎಂಕೆಐ, ಮಿಗ್‌-29 ಮತ್ತು ಜಾಗ್ವಾರ್ ಯುದ್ಧ ವಿಮಾನಗಳು ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದವು. ರೇಡಾರ್ ಹೊಂದಿರುವ ಯುದ್ಧವಿಮಾನ, ಸಿ-130-ಜೆ ಸರಕು ಸಾಗಣೆ ವಿಮಾನ ಮತ್ತು ಆಗಸದಲ್ಲಿಯೇ ವಿಮಾನಗಳಿಗೆ ಇಂಧನ ಭರ್ತಿ ಮಾಡುವ ವ್ಯವಸ್ಥೆಯನ್ನು ಕೂಡ ಅಭ್ಯಾಸದ ವೇಳೆ ಪರೀಕ್ಷಿಸಲಾಯಿತು ಎಂದು ಹೇಳಿದ್ದಾರೆ.

              ಈ ಸಮರಾಭ್ಯಾಸಕ್ಕೆ 'ಡಸರ್ಟ್‌ ನೈಟ್' ಎಂದು ಹೆಸರಿಡಲಾಗಿದೆ. 'ಮೂರೂ ದೇಶಗಳ ವಾಯುಪಡೆಗಳ ನಡುವೆ ಸಮನ್ವಯವನ್ನು ಹೆಚ್ಚಿಸುವುದು ಈ ಸಮರಾಭ್ಯಾಸದ ಉದ್ದೇಶವಾಗಿತ್ತು' ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಭಾರತೀಯ ವಾಯುಪಡೆಯ ವಿಮಾನಗಳು ಹಲವು ವಾಯುನೆಲೆಗಳಿಂದ ಕಾರ್ಯಾಚರಣೆ ನಡೆಸಿದವು.

               ಫ್ರಾನ್ಸ್ ಮತ್ತು ಯುಎಇ ವಾಯುಪಡೆಗಳ ಯುದ್ಧ ವಿಮಾನಗಳು ಅಲ್-ದಫ್ರಾ ವಾಯುನೆಲೆಯಿಂದ ಕಾರ್ಯಾಚರಿಸಿದವು. 'ಇಂತಹ ಸಮರಾಭ್ಯಾಸಗಳು ಈ ಪ್ರದೇಶದಲ್ಲಿ ರಾಜತಾಂತ್ರಿಕ ಸಂಬಂಧ ಹೆಚ್ಚುತ್ತಿರುವುದು, ಮಿಲಿಟರಿಗಳ ನಡುವೆ ಒಡನಾಟ ಜಾಸ್ತಿ ಆಗುತ್ತಿರುವುದನ್ನು ಸೂಚಿಸುತ್ತವೆ ಹಾಗೂ ಭಾರತೀಯ ವಾಯುಪಡೆಯ ಶಕ್ತಿಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತವೆ' ಎಂದು ವಾಯುಪಡೆಯು ತಿಳಿಸಿದೆ.

                ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಇರುವಾಗ ಈ ಸಮರಾಭ್ಯಾಸ ನಡೆದಿದೆ. ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಫ್ರಾನ್ಸ್‌ನ ತುಕಡಿಗಳು ಸಹ ಭಾಗವಹಿಸಲಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries