ಕೊಝಿಕ್ಕೋಡ್: ಪೀಡಿಯಾಟ್ರಿಕ್ ಎಮರ್ಜನ್ಸಿ ಮೆಡಿಸಿನ್‌ನಲ್ಲಿ ಡಾಕ್ಟರ್ ಆಫ್ ಮೆಡಿಸಿನ್ (ಡಿಎಂ) ಪದವಿಯನ್ನು ರಾಯಪುರ್‌ನ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್‌ನಿಂದ ಪಡೆದಿರುವ ಸಮ್ರೀನ್ ಯೂಸುಫ್, ಈ ಪದವಿ ಗಳಿಸಿದ ಕೇರಳದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೊಝಿಕ್ಕೋಡ್ ಮೂಲದ ಸಮ್ರೀನ್ ಅವರು ಈ ಸಬ್-ಸ್ಪೆಷಾಲಿಟಿ ಪ್ರೋಗ್ರಾಂನಲ್ಲಿ ಪದವಿ ಗಳಿಸಿದ ದೇಶದ ಎರಡನೇ ವ್ಯಕ್ತಿ ಎಂದೂ ಗುರುತಿಸಲ್ಪಟ್ಟಿದ್ದಾರೆ.
ಈ ನಿರ್ದಿಷ್ಟ ವೈದ್ಯಕೀಯ ಕೋರ್ಸ್ ರಾಯಪುರ್‌ನ ಏಮ್ಸ್‌ನಲ್ಲಿ ಮಾತ್ರ ಲಭ್ಯವಿದೆ.
ಡಾ. ಸಮ್ರೀನ್ ಅವರು ನರ್ಗಿಸ್ ಹಾಗೂ ಡಾ. ನಾಸಿರ್ ಯೂಸುಫ್ ಅವರ ಪುತ್ರಿ. ಡಾ ನಾಸಿರ್ ಅವರು ಥೊರಾಸಿಕ್ ಸರ್ಜನ್ ಆಗಿದ್ದಾರೆ. ಕೊಝಿಕ್ಕೋಡ್‌ನ ಭಾರತೀಯ ವಿದ್ಯಾಭವನದಲ್ಲಿ ಶಾಲಾ ಶಿಕ್ಷಣ ಪಡೆದ ಅವರು ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದು ನಂತರ ರಾಯಪುರ್‌ನ ಸರ್ಕಾರಿ ವೈದ್ಯಕೀಯ ಕಾಲೇಜು (ಡಾ ಭೀಮ್ ರಾವ್ ಅಂಬೇಡ್ಕರ್ ಮೆಡಿಕಲ್ ಕಾಲೇಜ್) ಇಲ್ಲಿಂದ ಎಂಡಿ (ಪೀಡಿಯಾಟ್ರಿಕ್ಸ್) ಪಡೆದಿದ್ದರು.