ನವದೆಹಲಿ: ಮಸೂದೆಗಳಿಗೆ ಸಹಿ ಹಾಕದೆ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಮುಂದುವರಿಸಿರುವ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಸಿಪಿಎಂ ನಾಯಕಿ ವೃಂದಾ ಕಾರಟ್ ಸವಾಲು ಹಾಕಿದ್ದಾರೆ.
ಬಿಜೆಪಿ ಅಜೆಂಡಾ ಜಾರಿಗೆ ತರುತ್ತಿರುವ ರಾಜ್ಯಪಾಲರು ನೇರವಾಗಿ ರಾಜಕೀಯ ಪ್ರವೇಶಿಸಿ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿ ಎಂದು ವೃಂದಾ ಕಾರಟ್ ಹೇಳಿದರು.
“ಗೌರವಾನ್ವಿತ ರಾಜ್ಯಪಾಲರು ರಾಜಕೀಯಕ್ಕೆ ಬರಲು ಆಸಕ್ತಿ ಹೊಂದಿದ್ದರೆ, ಅವರು ಹಾಗೆ ಮಾಡಬಹುದು. ಏಕೆಂದರೆ 2024ರ ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ. ರಾಜ್ಯಪಾಲರು ತಮ್ಮ ರಾಜಕೀಯ ಶಕ್ತಿಯನ್ನು ಅರಿತುಕೊಳ್ಳಬೇಕಾದರೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ವೃಂದಾ ಕಾರಟ್ ಹೇಳಿದ್ದಾರೆ.
''ನೇರವಾಗಿ ಚುನಾವಣಾ ರಾಜಕೀಯಕ್ಕೆ ಇಳಿಯುವುದು ಉತ್ತಮ. "ಬಿಜೆಪಿ ಟಿಕೆಟ್‍ನಲ್ಲಿ ಕೇರಳದ ಯಾವುದೇ ಸ್ಥಾನದಿಂದ ಸ್ಪರ್ಧಿಸಿ" ಎಂದು ಅವರು ತಿಳಿಸಿರುವರು.
ರಾಜ್ಯಪಾಲರು ಪ್ರತಿನಿತ್ಯ ಹೇಳಿಕೆ ನೀಡುವ ಮೂಲಕ ರಾಜ್ಯಪಾಲರ ಸ್ಥಾನಕ್ಕೆ ಅಗೌರವ ತೋರುವ ಬದಲು ಮುಖ್ಯಮಂತ್ರಿ ಜತೆಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯೆ ವೃಂದಾ ಕಾರಟ್ ಆಗ್ರಹಿಸಿದ್ದಾರೆ.