ಮಧೂರು: ಪರಕ್ಕಿಲ ಮಹಾದೇವ ಶಾಸ್ತ ವಿನಾಯಕ ಕ್ಷೇತ್ರದಲ್ಲಿ ಅಯೋಧ್ಯಾ ಪುರುಷ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಶ್ರೀ ರಾಮ ಜಪವನ್ನು ಜಪಿಸುತ್ತಾ ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮ ವೀಕ್ಷಣೆ ನಡೆಯಿತು. ಸುಮಾರು 250 ಮಂದಿ ಭಾಗವಹಿಸಿದ್ದರು. ಸಂಜೆ ನಡೆದ ದೀಪೋತ್ಸವಕೆ ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು, ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಬೆಳಗಿನ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಯು. ಸುಬ್ರಮಣ್ಯ ಆಸ್ರರು ಉದ್ಘಾಟಿಸಿದರು, ಸಂಜೆ ನಡೆದ ಕಾರ್ಯಕ್ರಮಕ್ಕೆ ಶ್ಯಾಮಲಾ. ಯು ದೀಪ ಬೆಳಗಿಸಿದರು. ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದರು.ತರುಣ ಕಲಾವೃಂದ ಸದಸ್ಯರು,ಮಹಿಳಾ ಸಮಿತಿಯ ಸದಸ್ಯರು,ಹಿರಿಯ ಸದಸ್ಯರು, ಭಕ್ತವೃಂದರೆಲ್ಲೂ ಉಪಸ್ಥಿತರಿದ್ದರು.