ಮಂಜೇಶ್ವರ: ಕಣ್ವತೀರ್ಥ ಶ್ರೀ ಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರದಲ್ಲಿ ಪೇಜಾವರ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ನೂತನ ಸುತ್ತುಪೌಳಿಯ ಲೋಕಾರ್ಪಣೆ ಸೋಮವಾರ ನಡೆಯಿತು. ಶ್ರೀಕ್ಷೇತ್ರಕ್ಕೆ ಆಗಮಿಸಿದ ಶ್ರೀಗಳನ್ನು ಗೋಪಾಲ ಶೆಟ್ಟಿ ಅರಿಬೈಲು ಸಹಿತ ಸಮಸ್ಥ ಕಾರ್ಯಕರ್ತರು ಸ್ವಾಗತಿಸಿದರು. ಭಕ್ತರು ಶ್ರೀ ಗಳಿಗೆ ಫಲ ಪುಷ್ಪ ಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡೆದರು. ಬಳಿಕ ವಾಸ್ತು ಪೂಜೆ ನಡೆಯಿತು. ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಪ್ರತಿಷ್ಠಾ ಸಮಾರಂಭಕ್ಕೆ ತೆರಳಲಿರುವ ಶ್ರೀಗಳಿಗೆ ಸಮಸ್ತರ ಪರವಾಗಿ ಗೌರವಾರ್ಪಣೆ ಈ ಸಂದರ್ಭ ನಡೆಯಿತು.