ಕಣ್ಣೂರು: ಕಣ್ಣೂರು ಕೇಂದ್ರ ಕಾರಾಗೃಹದಿಂದ ಆರೋಪಿ ಪರಾರಿಯಾಗಿರುವ ಪ್ರಕರಣದಲ್ಲಿ ಕಾರಾಗೃಹ ಅಧಿಕಾರಿಗಳ ತೀವ್ರ ವೈಫಲ್ಯ ಕಂಡು ಬಂದಿದೆ.
ಜೈಲು ನಿಯಮ ಉಲ್ಲಂಘಿಸಿ ಕರ್ತವ್ಯಕ್ಕೆ ನಿಯೋಜಿಸಿದ್ದೇ ಆರೋಪಿ ಪರಾರಿಯಾಗಲು ಕಾರಣ ಎಂದು ತಿಳಿದುಬಂದಿದೆ. ನಾಲ್ಕು ತಿಂಗಳು ಪೂರ್ಣಗೊಳ್ಳುವ ಮೊದಲೇ ಹೊರಗಿನ ಕೆಲಸ ನೀಡಿರುವುದು ಅಧಿಕಾರಿಗಳ ಗಂಭೀರ ವೈಫಲ್ಯ.
ಆರೋಪಿಗಾಗಿ ನೆರೆ ರಾಜ್ಯಗಳಲ್ಲಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೋಲೀಸ್ ತನಿಖೆಯನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೂ ವಿಸ್ತರಿಸಲಾಗಿದೆ. ಭದ್ರತಾ ಲೋಪದ ಬಗ್ಗೆ ಕಾರಾಗೃಹ ಇಲಾಖೆ ತನಿಖೆ ನಡೆಸುತ್ತಿದೆ. ನಾಳೆ ವಿಚಾರಣೆ ವರದಿ ಕೈಸೇರಲಿದೆ
ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹರ್ಷದ್ ಜೈಲಿನಿಂದ ಮೊನ್ನೆ ಪರಾರಿಯಾಗಿದ್ದ. ಜೈಲಿಗೆ ಬಂದ ಕೆಲವೇ ದಿನಗಳಲ್ಲಿ ಹರ್ಷದ್ ಗೆ ಕಲ್ಯಾಣ ಕಚೇರಿಯಲ್ಲಿ ಕರ್ತವ್ಯ ನೀಡಲಾಯಿತು. ಗೇಟ್ ಹೊರಗೆ ಪತ್ರಿಕೆ ಲೇಖನಗಳನ್ನು ತೆಗೆದುಕೊಳ್ಳಲು ಅನುಮತಿಸಿದಾಗ, ಆತ ಸಮಯ ನೋಡಿ ಕಾಲ್ಕಿತ್ತ.
ಹರ್ಷದ್ ವಿರುದ್ಧ ಬೆಂಗಳೂರಿನಿಂದ ಡ್ರಗ್ಸ್ ಸಾಗಾಟ ಮಾಡಿದ ಪ್ರಕರಣ ದಾಖಲಾಗಿದೆ. ಈತನ ವಿರುದ್ಧ ಹಲವು ಕಳ್ಳತನ ಪ್ರಕರಣಗಳೂ ದಾಖಲಾಗಿವೆ.