HEALTH TIPS

ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ ಬಗೆಗಿನ ಕಾಂಗ್ರೆಸ್, ಸಿಪಿಎಂ ವಿರುದ್ಧ ನಿಲುವನ್ನು ಕೇರಳದ ಜನತೆ ಧಿಕ್ಕರಿಸಿದ್ದಾರೆ-ಕೆ. ಸುರೇಂದ್ರನ್

         ಕಾಸರಗೋಡು|: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಾಗೂ ಸಿಪಿಎಂ ಧೋರಣೆಯನ್ನು ಕೇರಳದ ಜನತೆ ಅಲ್ಲಗಳೆದಿದ್ದು, ರಾಜ್ಯದ ಜನತೆ ಎನ್‍ಡಿಎ ಕಡೆ ಮುಖ ಮಾಡಲಾರಂಭಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ತಿಳಿಸಿದ್ದಾರೆ. 

           ಅವರು 'ಮೋದಿ ಗ್ಯಾರಂಟಿ'ಸಂದೇಶದೊಂದಿಗೆ ತಮ್ಮ ನೇತೃತ್ವದಲ್ಲಿ ನಡೆಯಲಿರುವ ಕೇರಳ ಪಾದಯಾತ್ರೆ ಅಂಗವಾಗಿ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದಲ್ಲಿ ನರೇಂದ್ರ ಮೋದಿ ಜಾರಿಗೊಳಿಸುವತ್ತಿರುವ ಗ್ಯಾರಂಟಿ ಕೇರಳದ ಸಮಗ್ರ ಅಭಿವೃದ್ಧಿಗೆ ಹಾದಿಮಾಡಿಕೊಡುತ್ತಿದೆ. 2014ಕ್ಕೂ ಹಿಂದಿನ ಯುಪಿಎ ಸರ್ಕಾರ ಹಾಗೂ ನಂತರದ ಎನ್‍ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಕೇರಳದ ಜನತೆ ತುಲನೆಮಾಡಲಾರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಈ ದೆಶವನ್ನು ಅಭಿವೃದ್ಧಿಯ ಪಥದೆಡೆಗೆ ಕೊಂಡೊಯ್ಯಲು ಸಾಧ್ಯ ಎಂಬುದು ಜನತೆಗೆ ಮನವರಿಕೆಯಾಗಿದೆ. ಇದಕ್ಕಾಗಿ ನರೇಂದ್ರ ಮೋದಿ ನಿಲುವಿಗೆ ಬದ್ಧರಾಗಿ ನಿಂತು ಅಯೋಧ್ಯೆ ಪ್ರಾಣ ಪ್ರತಿಷ್ಠೆ ವಿರೋದಿಸಿದವರಿಗೆ ತಾಕೀತು ನೀಡುವ ರೀತಿಯಲ್ಲಿ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಶಾಮೀಲಾಗಿದ್ದಾರೆ.

ಪೊಳ್ಳು ಗ್ಯಾರಂಟಿಯಲ್ಲ:

           ಕೇರಳದ ಸಿಎಂ ಪಿಣರಾಯಿ ವಿಜಯನ್ ನೀಡುವ ರೀತಿಯಲ್ಲಿ ಮೋದಿ ಸರ್ಕಾರ ಪೊಳ್ಳು ಗ್ಯಾರಂಟಿಯನ್ನು ನೀಡುತ್ತಿಲ್ಲ. ಇದು ಸಮಗ್ರ ಬದಲಾಣೆಗಿರುವ ಗ್ಯಾರಂಟಿಯಾಗಿದ್ದು, ಕೇರಳದ ಜನತೆ ಮೋದಿ ಸರ್ಕಾರದ ಮೇಲೆ ವಿಶ್ವಾಸವಿರಿಸಿ ಈ ಬಾರಿ ಎನ್‍ಡಿಎ ಬೆಮಬಲಿಸುವ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನೇತ್ರತ್ವದ ಐಎನ್‍ಡಿಐಎ  ಒಕ್ಕೂಟದಲ್ಲಿ ಮಿತ್ರಪಕ್ಷಗಳಿಗೆ ವಿಶ್ವಾಸವಿಲ್ಲದ ಸ್ಥಿತಿ ಎದುರಾಗಿದೆ. ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಒಬ್ಬೊಬ್ಬರಾಗಿ ಒಕ್ಕುಟ ತ್ಯಜಿಸುತ್ತಿದ್ದಾರೆ. ಮುಸ್ಲಿಂ, ಕ್ರೈಸ್ತ ಬಾಂಧವರು ಪ್ರಾಣಪ್ರತಿಷ್ಠೆಯನ್ನು ವಿರೋಧಿಸದಿದ್ದರೂ, ಕಾಂಗ್ರೆಸ್ ಮತ್ತು ಸಿಪಿಎಂ ವಿರೋಧಿಸುತ್ತಿರುವುದರ ಹಿಂದೆ ರಾಜಕೀಯ ಪಿತೂರಿಯಿದೆ ಎಂದು ಆರೊಪಿಸಿದರು. ಕೇರಳದಲ್ಲಿ ಉಭಯ ರಂಗಗಳು ಭ್ರಷ್ಟಾಚಾರ ಪೊಷಿಸತ್ತಿದೆ. ಈ ಎಲ್ಲ ಅಂಶಗಳನ್ನು ಜನತೆಯ ಮುಂದಿಡುವ ನಿಟ್ಟಿನಲ್ಲಿ ಪಾದಯಾತ್ರೆ ನಡೆಯಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ Pಬಿಜೆಪಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ.ಬಾಲಕೃಷ್ಣ ಶೆಟ್ಟಿ, ಎ. ಸಂಪತ್, ಶಿವರಾಜ್ ಉಪಸ್ಥಿತರಿದ್ದರು.

            ಚಿತ್ರ ಮಾಹಿತಿ: ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಪಾದಯಾತ್ರೆ ಆರಂಭಕ್ಕೆ ಮೊದಲು ಮಧೂರು ಸ್ರೀ ಮದನಂತೇಶ್ವರ ದೇವಸ್ತನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries