ಗುವಾಹಟಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದೇ 22ರಂದು (ಸೋಮವಾರ) ಬಟಾದ್ರವದಲ್ಲಿ ಇರುವ ವೈಷ್ಣವ ಸಂತ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳಕ್ಕೆ ಭೇಟಿ ನೀಡದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಮನವಿ ಮಾಡಿದ್ದಾರೆ.
ಗುವಾಹಟಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದೇ 22ರಂದು (ಸೋಮವಾರ) ಬಟಾದ್ರವದಲ್ಲಿ ಇರುವ ವೈಷ್ಣವ ಸಂತ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳಕ್ಕೆ ಭೇಟಿ ನೀಡದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಮನವಿ ಮಾಡಿದ್ದಾರೆ.
'ಅಯೋಧ್ಯೆಯಲ್ಲಿ ಸೋಮವಾರ ರಾಮ ಮಂದಿರ ಶಂಕುಸ್ಥಾಪನೆ ಕಾರ್ಯ ನಡೆಯಲಿದೆ.
'ರಾಮ ಮತ್ತು ಶಂಕರದೇವರ ನಡುವೆ ಯಾವುದೇ ಸ್ಪರ್ಧೆಯಿಲ್ಲ. ಇಡೀ ರಾಷ್ಟ್ರದ ಗಮನ ಅಯೋಧ್ಯೆಯ ಮೆಲೆ ಇರುವಾಗ, ಅಸ್ಸಾಂನಲ್ಲಿ ಅನಗತ್ಯವಾಗಿ ಆ ಗಮನ ಬೇರೆಡೆಗೆ ತಿರುಗಬಾರದು' ಎಂದು ಅವರು ಹೇಳಿದರು.
ನಾಗಾವ್ ಜಿಲ್ಲೆಯಲ್ಲಿನ ಬಟಾದ್ರವವು ಅಸ್ಸಾಂ ಸಂತ, ವಿದ್ವಾಂಸ ಮತ್ತು ಸಾಮಾಜಿಕ- ಧಾರ್ಮಿಕ ಸುಧಾರಕರಾದ ಶ್ರೀಮಂತ ಶಂಕರದೇವರ ಜನ್ಮಸ್ಥಳ. ಅವರು 15-16ನೇ ಶತಮಾನದಿಂದ ಅಸ್ಸಾಂನ ಸಾಂಸ್ಕೃತಿ ಮತ್ತು ಧಾರ್ಮಿಕ ಇತಿಹಾಸದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದಾರೆ.