ತಿರುವನಂತಪುರಂ: ಮೊದಲ ಅಂತಾರಾಷ್ಟ್ರೀಯ ಕ್ರೀಡಾ ಶೃಂಗಸಭೆ ಇಂದು ಕರಿಯಾವಟ್ಟಂ ಸ್ಪೋಟ್ರ್ಸ್ ಹಬ್‍ನಲ್ಲಿ ಆರಂಭವಾಗಿದೆ. ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶೃಂಗಸಭೆಯನ್ನು ಉದ್ಘಾಟಿಸಿದರು. ಇಂದಿನಿಂದ ಆರಂಭವಾದ ಶೃಂಗಸಭೆ ಇದೇ 26ರವರೆಗೆ ನಡೆಯಲಿದೆ.
ಕೇರಳ ಕ್ರಿಕೆಟ್ ಅಸೋಸಿಯೇಷನ್ ಬಿಸಿಸಿಐ ನೆರವಿನೊಂದಿಗೆ ಕೊಚ್ಚಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ಮತ್ತು ಮಲಪ್ಪುರಂ ಮತ್ತು ಕೋಝಿಕ್ಕೋಡ್‍ನಲ್ಲಿ ನಿರ್ಮಿಸಲಿರುವ ಅಂತಾರಾಷ್ಟ್ರೀಯ ಪುಟ್‍ಬಾಲ್ ಸ್ಟೇಡಿಯಂಗಳಂತಹ ಯೋಜನೆಗಳನ್ನು ಶೃಂಗಸಭೆಯಲ್ಲಿ ಅಧಿಕೃತವಾಗಿ ಪ್ರಸ್ತುತಪಡಿಸಲಿದೆ.
ಸ್ಪೋಟ್ರ್ಸ್ ಎಕ್ಸ್‍ಪೋ, ಕ್ರೀಡಾ ಸಮ್ಮೇಳನಗಳು ಮತ್ತು ಸೆಮಿನಾರ್‍ಗಳು ನಾಲ್ಕು ದಿನಗಳ ಕಾಲ ನಡೆಯುತ್ತವೆ. ಪ್ರಮುಖ ಕ್ರೀಡಾಪಟುಗಳಾದ ಅಂಜು ಬಾಬಿ ಜಾರ್ಜ್, ಐಎಂ ವಿಜಯನ್, ಬೈಚುಂಗ್ ಭುಟಿಯಾ, ಸಂಜು ಸ್ಯಾಮ್ಸನ್, ಮಿನ್ನುಮಣಿ, ಸಿಕೆ ವಿನೀತ್ ಮತ್ತು ವಿವಿಧ ಕ್ರೀಡಾ ಸಂಸ್ಥೆಗಳ ಪ್ರತಿನಿಧಿಗಳು ಶೃಂಗಸಭೆಯ ವಿವಿಧ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ.