ಪಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ 'ಕಸ ಹೋಗಿ ಕಸದ ತೊಟ್ಟಿಗೆ ಸೇರಿದೆ' ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಹೇಳಿದ್ದಾರೆ.
ಪಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ 'ಕಸ ಹೋಗಿ ಕಸದ ತೊಟ್ಟಿಗೆ ಸೇರಿದೆ' ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಹೇಳಿದ್ದಾರೆ.
ಕಳೆದ ಗುರುವಾರ ರೋಹಿಣಿ ಅವರು 'ಸೈದ್ಧಾಂತಿಕವಾಗಿ ಅಲೆದಾಡುವವರು, ಸಮಾಜವಾದದ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಾರೆ' ಎಂದು ವಿವಾದಿತ ಹೇಳಿಕೆಯ ಪೋಸ್ಟ್ ಹಾಕಿ ನಂತರ ಡಿಲೀಟ್ ಮಾಡಿದ್ದರು. ಈ ಬಗ್ಗೆ ಸಮರ್ಥನೆ ನೀಡಿದ್ದ ಆರ್‌ಜೆಡಿ, ಆಚಾರ್ಯ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡಿವೆಯೇ ಹೊರತು ಬಿಹಾರ ಸಿ.ಎಂ ನಿತೀಶ್ ಕುಮಾರ್ ಬಗ್ಗೆ ಅಲ್ಲ' ಎಂದು ಹೇಳಿಕೊಂಡಿತ್ತು. ಇದೀಗ ನೇರವಾಗಿ ನಿತೀಶ್ ಕುಮಾರ್ ಬಗ್ಗೆಯೇ ಪೋಸ್ಟ್ ಮಾಡಿದ್ದಾರೆ.