ತಿರುವನಂತಪುರಂ: ಕೇರಳದಲ್ಲಿ ಶಾಲಾ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಸುಧಾರಿಸಿದ್ದರಿಂದ ಕೇರಳೀಯರು ವಿದೇಶಕ್ಕೆ ಹೋಗುತ್ತಾರೆ ಎಂದು ಸಚಿವ ಎಂ.ಬಿ.ರಾಜೇಶ್ ಹೇಳಿರುವÀರು.
ಕೇರಳದಲ್ಲಿ ಉದ್ಯೋಗಾವಕಾಶಗಳಿಲ್ಲದ ಕಾರಣ ಕೇರಳೀಯರು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಕ್ಕೆ ಉದ್ಯೋಗವರಸಿ ಹೋಗುತ್ತಿದ್ದಾರೆ ಎಂಬ ವಾದಗಳಿವೆ. ಆದರೆ, ಆ ಕಾರಣಕ್ಕಾಗಿ ಅಲ್ಲ, ಮಲಯಾಳಿಗಳು ವಿಶ್ವದ ಯಾವುದೇ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಪಡೆಯುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಎಂ.ಬಿ.ರಾಜೇಶ್ ಹೇಳಿರುವರು.
ಅವರು ತಿರುವನಂತಪುರದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಯ ಹಳೆಯ ವಿದ್ಯಾರ್ಥಿಗಳ ಕೂಟವಾದ ಟ್ಯಾಲೆಂಟೊ 2024 ರ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ಇಂಡಿಯಾ ಸ್ಕಿಲ್ಸ್ ರಿಪೋರ್ಟ್ 2024 ರ ಪ್ರಕಾರ, ಕೇರಳ ಮತ್ತು ತಿರುವನಂತಪುರಂ ನಗರವು ಶಿಕ್ಷಣತಜ್ಞರಿಗೆ ಕೆಲಸ ಮಾಡಲು ಹೆಚ್ಚು ಆದ್ಯತೆಯ ಸ್ಥಳಗಳಾಗಿವೆ. ಕಳೆದ ಹತ್ತು ವರ್ಷಗಳಲ್ಲಿ 17ವರೆ ಲಕ್ಷ ಮಂದಿ ಭಾರತೀಯ ಪೌರತ್ವ ತ್ಯಜಿಸಿ ದೇಶ ತೊರೆದಿದ್ದಾರೆ. ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ ಮೂಲಕ ಉದ್ಯೋಗ ಪಡೆದ ಸುಮಾರು 3,000 ಜನರು ತಿರುವಾಂಕೂರ್ ಇಂಟರ್‍ನ್ಯಾಶನಲ್ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.