ನವದೆಹಲಿ: ಯೋಗ ಗುರು ಬಾಬಾ ರಾಮದೇವ ಅವರ ಆಳೆತ್ತರದ ಮೇಣದ ಪ್ರತಿಮೆಯನ್ನು ದೆಹಲಿಯಲ್ಲಿ ಅನಾವರಣಗೊಳಿಸಲಾಗಿದೆ. ತದನಂತರ ನ್ಯೂಯಾರ್ಕ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪ್ರತಿಮೆ ಇರಿಸಲಾಗುತ್ತದೆ.
ನವದೆಹಲಿ: ಯೋಗ ಗುರು ಬಾಬಾ ರಾಮದೇವ ಅವರ ಆಳೆತ್ತರದ ಮೇಣದ ಪ್ರತಿಮೆಯನ್ನು ದೆಹಲಿಯಲ್ಲಿ ಅನಾವರಣಗೊಳಿಸಲಾಗಿದೆ. ತದನಂತರ ನ್ಯೂಯಾರ್ಕ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪ್ರತಿಮೆ ಇರಿಸಲಾಗುತ್ತದೆ.
ವೃಕ್ಷಾಸನ ಭಂಗಿಯಲ್ಲಿ ಮೇಣದ ಪ್ರತಿಮೆಯನ್ನು ತಯಾರಿಸಲಾಗಿದ್ದು, ರಾಮದೇವ ಅವರು ಯೋಗಾಭ್ಯಾಸಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಗಿದೆ.
ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಬಾಬಾ ರಾಮದೇವ ಭಾಗವಹಿಸಿದ್ದು, ಮೇಣದ ಪ್ರತಿಮೆಯ ಮುಂದೆ ಕೆಲವು ಆಸನಗಳನ್ನು ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
'ಈ ಮೇಣದ ಪ್ರತಿಮೆಯನ್ನು ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ನ ಮ್ಯೂಸಿಯಂನಲ್ಲಿ ಇರಿಸಲಾಗುವುದು. ಅಭಿಮಾನಿಗಳು ಮ್ಯೂಸಿಯಂಗೆ ಬಂದು ಪ್ರತಿಮೆಯನ್ನು ಕಾಣಬಹುದು' ಎಂದು ಮರ್ಲಿನ್ ಎಂಟರ್‌ಟೈನ್‌ಮೆಂಟ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.