ಕಾಸರಗೋಡು: ಮಾಲಿನ್ಯ ಮುಕ್ತ ನವ ಕೇರಳ ಅಭಿಯಾನವನ್ನು ಬಲಪಡಿಸುವ ಕುರಿತು ಸಭೆ ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಮಂಡಲ ಮಟ್ಟದ ಸಂಚಾಲಕ, ಸಹಾಯಕ ಜಿಲ್ಲಾಧಿಕಾರಿ ಡಾ. ಆರ್ ಆರ್ ಸಿರೋಶ್ ಪಿ. ಜಾನ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಗಳ ಸಮನ್ವಯದಿಂದ ಉತ್ತಮ ಪ್ರಚಾರಾಂದೋಲನ ಹಮ್ಮಿಕೊಳ್ಳುವ ಮೂಲಕ ಹೊಸ ವರ್ಷದಲ್ಲಿ ಕಾರ್ಯಚಟುವಟಿಕೆಗಳನ್ನು ಬಲಪಡಿಸುವ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ತ್ಯಾಜ್ಯ ವಿಲೇವಾರಿಗೆ ವಿಶೇಷ ವ್ಯವಸ್ಥೆ ಇದೆ ಎಂದು ವೈದ್ಯಾಧಿಕಾರಿಗಳ ಪ್ರತಿನಿಧಿ ಮಾಹಿತಿ ನೀಡಿದರು. ಜತೆಗೆ ಮನೆಗಳಿಗೆ ತೆರಳುವ ಆಶಾ ಕಾರ್ಯಕರ್ತೆಯರು ಆಯಾ ಮನೆಗಳ ಸ್ವಚ್ಛತೆ ಕಾಪಾಡುವ ಬಗ್ಗೆ ಬೋಧನೆ ಹಾಗೂ ಸ್ವಚ್ಛತೆ ಬಗ್ಗೆ ಖಚಿತಪಡಿಸಿಕೊಳ್ಳಲಿದ್ದಾರೆ. ಆಸ್ಪತ್ರೆಗಳಲ್ಲಿ ಉದ್ಯಾನ ನಿರ್ಮಿಸುವ ಯೋಜನೆ ಜಾರಿಗೊಳಿಸಲಾಗುವುದು. ಖಾಸಗಿ ಆಸ್ಪತ್ರೆಗಳಿಂದ ಹೊರಬೀಳುವ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇದೆÉ್ತಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸಮರ್ಪಕ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಇಲ್ಲದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಿವಿಧ ಆಯುರ್ವೇದ ಮತ್ತು ಹೋಮಿಯೋಪತಿ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ಆರೋಗ್ಯ ಕೇಂದ್ರದ ವೈದ್ಯಕೀಯ ತ್ಯಾಜ್ಯದೊಂದಿಗೆ ಪಾಲಿಯೇಟಿವ್ ಕೇರ್ ಯೂನಿಟ್‍ಗಳ ಗೃಹ ವೈದ್ಯಕೀಯ ತ್ಯಾಜ್ಯವನ್ನು ಸಹ ವರ್ಗಾಯಿಸಲಾಗುವುದು.
ಕರಾವಳಿ ಮತ್ತು ಸಮುದ್ರ ತ್ಯಾಜ್ಯವನ್ನು ಬೇರ್ಪಡಿಸುವ ವ್ಯವಸ್ಥೆ ಇದ್ದು, ಇದರ ಸಂಸ್ಕರಣಾ ಕಾರ್ಯಾಚರಣೆಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಮತ್ತು ಸುಚೀಕರಣದ ಕಾರ್ಯಕ್ಷಮತೆ ಹೆಚ್ಚಿಸಲಾಗುವುದು. ಮೀನುಗಾರಿಕೆ ಇಲಾಖೆಯು ಕರಾವಳಿಯ ಮನೆಗಳಲ್ಲಿ ಶುಚಿತ್ವ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲಿದೆ. ಮೀನು ಮಾರುಕಟ್ಟೆಗಳ ಸ್ವಚ್ಛತೆ ಮತ್ತು ಮೀನುಗಾರರ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲಾಗುವುದು.
ನನ್ನ ತ್ಯಾಜ್ಯ ನನ್ನ ಜವಾಬ್ದಾರಿ':
ಅಭಿಯಾನದ ಅಂಗವಾಗಿ ಸಂಸ್ಕøತಿ ಇಲಾಖೆ ಅಧೀನದಲ್ಲಿರುವ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಸಾಮೂಹಿಕ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸಿ 'ನನ್ನ ತ್ಯಾಜ್ಯ ನನ್ನ ಜವಾಬ್ದಾರಿ' ಎಂಬ ಸಂದೇಶ ಸಾರಲಿದೆ. ನಾಗರಿಕ ಸರಬರಾಜು ಮಳಿಗೆಗಳ ಮುಂದೆ ತ್ಯಾಜ್ಯ ನಿರ್ವಹಣೆ ಮತ್ತು ದಂಡದ ಕಾನೂನು ಅಂಶಗಳಿಗೆ ಸಂಬಂಧಿಸಿದ ಬೋರ್ಡ್‍ಗಳನ್ನು ಹಾಕಲಾಗುವುದು. ಜೂನ್ 5 ರಂದು ಶಾಲಾ-ಕಾಲೇಜುಗಳು ಶೂನ್ಯ ತ್ಯಾಜ್ಯ ಕ್ಯಾಂಪಸ್ ಯೋಜನೆ ಜಾರಿಗೊಳಿಸಲಿದೆ.
ಅಜೈವಿಕ ತ್ಯಾಜ್ಯವನ್ನು ಸಂಸ್ಕರಿಸಲು ಶಾಲೆಗಳಲ್ಲಿ ಮಿನಿ ಎಂಸಿಎಫ್‍ಗಳನ್ನು ಸ್ಥಾಪಿಸಲಾಗುವುದು. ಪ್ರತಿ ಕಟ್ಟಡದಲ್ಲಿ ಅಜೈವಿಕ ತ್ಯಾಜ್ಯವನ್ನು ಬೇರ್ಪಡಿಸಲು ತೊಟ್ಟಿಗಳನ್ನು ಅಳವಡಿಸಲಾಗುವುದು. ಶಾಲೆಯಲ್ಲಿ ಜೈವಿಕ ತ್ಯಾಜ್ಯವನ್ನು ಕೃಷಿ ಉದ್ದೇಶಕ್ಕೆ ಬಳಸಲಾಗುವುದು. ವಿದ್ಯಾರ್ಥಿಗಳು, ಪಿಟಿಎ ಶಾಲಾ ಆಡಳಿತ ಸಮಿತಿ ಮತ್ತು ವಿವಿಧ ಕ್ಲಬ್‍ಗಳ ಜಂಟಿ ಕ್ರಮದೊಂದಿಗೆ ಶಾಲಾ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಾಮೂಹಿಕ ಶಿಕ್ಷಣ ಕಾರ್ಯಕ್ರಮವನ್ನು ನಡೆಸಲಾಗುವುದು. ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ, ಜಿಲ್ಲಾ ಸರಬರಾಜು ಅಧಿಕಾರಿ ಎ.ಸಜ್ಜದ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅವಿನಾಶ್ ಸುಂದರ್, ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕಿ ಆರ್.ರೇಖಾ, ಶಿಕ್ಷಣ ಇಲಾಖೆ ಆಡಳಿತ ಸಹಾಯಕ ಬಿ.ಸುರೇಂದ್ರನ್, ಅಬಕಾರಿ ನಿರೀಕ್ಷಕ ಪಿ.ಆರ್.ಅನುಕುಮಾರ್, ಕಾರ್ಯದರ್ಶಿ ಡಿ.ಎಂ.ಒ ಆರೋಗ್ಯ ತಾಂತ್ರಿಕ ಸಹಾಯಕ ಟಿ.ವಿ.ದಾಮೋದರನ್ ಮೊದಲಾದವರು ಉಪಸ್ಥಿತರಿದ್ದರು.