ಕುಂಬಳೆ: ಸಂಶೋಧಕ, ಸಾಹಿತಿ, ವಿದ್ವಾಂಸ ಪ್ರೊಫೆಸರ್ ಅಮೃತ ಸೋಮೇಶ್ವರ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು. ಕ.ಸಾ.ಪ.ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಯಂ.ನಾ.ಚಂಬಲ್ತಿಮಾರ್ ಪ್ರೊ.ಅಮೃತ ಸೋಮೇಶ್ವರರ ನಿಸ್ವಾರ್ಥ ಸಾಹಿತ್ಯ ಸೇವೆ, ಸಾಧನೆ ಹಾಗೂ ಶೋಧನೆಯ ಬಗ್ಗೆ ಗುಣಗಾನಮಾಡಿ ನುಡಿನಮನ ಸಲ್ಲಿಸಿದರು.ಸಾಹಿತಿ ಆಯಿಷ ಪೆರ್ಲ ಹಾಗೂ ಹಿರಿಯ ರಂಗಕರ್ಮಿ ಸುಬ್ಬಣ್ಣ ಶೆಟ್ಟಿ ಶ್ರದ್ಧಾಂಜಲಿ ಸಮರ್ಪಿಸಿದರು.
ನ್ಯಾಯವಾದಿ ಥೋಮಸ್ ಡಿ’ಸೋಜ, ಕ.ಸಾ.ಪ ಕಾಸರಗೋಡು ಕೋಶಾಧ್ಯಕ್ಷ ಡಾ.ರಾಜಗೋಪಾಲ್, ಕ.ಸಾ.ಪ ಸಂಘಟನಾ ಕಾರ್ಯದರ್ಶಿಗಳಾದ ವಿಶಾಲಾಕ್ಷ ಪುತ್ರಕಳ, ರಾಮಚಂದ್ರ ಭಟ್ ಧರ್ಮತ್ತಡ್ಕ, ನ್ಯಾಯವಾದಿ ವಿಠಲ ಭಟ್ ಮೊಗಸಾಲೆ, ಗಣೇಶ್ ಪ್ರಸಾದ್ ಪಾಣೂರು ಉಪಸ್ಥಿತರಿದ್ದರು. ಕ.ಸಾ.ಪ ಕಾಸರಗೋಡು ಘಟಕ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಕಸಾಪ ಕಾಸರಗೋಡು ಘಟಕ ಗೌರವ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ ವಂದಿಸಿದರು.