ಮುಂಬೈ: ಡಿಜಿಟಲ್ ವಹಿವಾಟು ವ್ಯಾಪಕವಾಗಿರುವ ಈ ಯುಗದಲ್ಲಿ ಟಾಟಾ ಗ್ರೂಪ್ ಕ್ಷೇತ್ರವನ್ನು ಡಿಜಿಟಲ್ ವಹಿವಾಟು ಸೇವೆಗಳಿಗೆ ಬದಲಾಯಿಸಲು ಸಿದ್ಧತೆ ನಡೆಸಿದೆ.
ಕಂಪನಿಯ ಡಿಜಿಟಲ್ ಪಾವತಿ ಅಪ್ಲಿಕೇಶನ್ ಟಾಟಾ ಪೇ(ಪಾವತಿ)ಗೆ ರಿಸರ್ವ್ ಬ್ಯಾಂಕ್ ಅಗ್ರಿಗೇಟರ್ ಪರವಾನಗಿಗಳನ್ನು ನೀಡಿದೆ. ಟಾಟಾ ಪೇ ಎಂಬುದು ಗೂಗಲ್ ಪೇ, ಪೋನ್ ಪೇ ಮುಂತಾದ ಡಿಜಿಟಲ್ ವಹಿವಾಟುಗಳಿಗೆ ವೇದಿಕೆಯಾಗಿದೆ.
ಇ-ಕಾಮರ್ಸ್ ಸೇವೆಗಳನ್ನು ನಡೆಸಲು ಈ ವೇದಿಕೆಯು ಉಪಯುಕ್ತವಾಗಿರುತ್ತದೆ. ಟಾಟಾ ಪೇ ಅನ್ನು ಟಾಟಾ ಗ್ರೂಪ್ ಘಟಕವಾದ ಟಾಟಾ ಡಿಜಿಟಲ್ ನಿರ್ವಹಿಸುತ್ತದೆ.
2022 ರಲ್ಲಿ ಡಿಜಿಟಲ್ ವಹಿವಾಟುಗಳನ್ನು ಸಕ್ರಿಯಗೊಳಿಸಲು ಟಾಟಾ ಗ್ರೂಪ್ ಐಸಿಐಸಿಐ ಬ್ಯಾಂಕ್‍ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿತ್ತು. ಟಾಟಾ ಪೇ ಹೊರತುಪಡಿಸಿ, ಟಾಟಾ ಹಲವಾರು ವಹಿವಾಟು ಯೋಜನೆಗಳನ್ನು ಹೊಂದಿದೆ. ಕಂಪನಿಯು ವೈಟ್ ಲೇಬಲ್ ಎಟಿಎಂಗಳು ಮತ್ತು ಗ್ರಾಮೀಣ ಭಾರತದಲ್ಲಿ ಪ್ರಿಪೇಯ್ಡ್ ಪಾವತಿ ಸೇವೆಗಳನ್ನು ಹೊಂದಿದೆ.