ಮುಳ್ಳೇರಿಯ: ಮುಳ್ಳೇರಿಯದಲ್ಲಿ ಸ್ಕೂಟರಿಗೆ ಮಿನಿ ಲಾರಿ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ತರಕಾರಿ ಅಂಗಡಿಯ ನೌಕರನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಆದೂರು ವಿಟ್ಟಿಯಾಡಿ ಸಿ ಎ ನಗರ ನಿವಾಸಿ ರಿಯಾಝ್ ಅನ್ವರ್ (18) ಸಾವನ್ನಪ್ಪಿದ ದುರ್ದೈವಿ.
ಶನಿವಾರ ಮುಳ್ಳೇರಿಯ - ಕುಂಬಳೆ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಂಗಡಿಯ ಅಗತ್ಯಕ್ಕಾಗಿ ಇನ್ನೊಬ್ಬರ ಸ್ಕೂಟರಿನಲ್ಲಿ ಸಂಚರಿಸುತ್ತಿರುವ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.