ಕಾಸರಗೋಡು: ಪನತ್ತಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾದ ಕೇರಗ್ರಾಮ ಯೋಜನೆಯ ಉದ್ಘಾಟನೆ ಶಾಸಕ ಇ. ಚಂದ್ರಶೇಖರನ್ ನೆರವೇರಿಸಿದರು. ಪನತ್ತಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 600 ರೈತರು ಯೋಜನೆಯ ಲಾಭ ಪಡೆಯಲಿದ್ದಾರೆ.
ಪ್ರಧಾನ ಕೃಷಿ ಅಧಿಕಾರಿ ಮಿನ್ನಿ ಪಿ.ಜಾನ್ ಅಂತರ ಬೆಳೆಯನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ, ಸಹಾಯಕ ಕೃಷಿ ನಿರ್ದೇಶಕ ಟಿ. ಟಿ.ಅರುಣ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಪನತ್ತಡಿ ಪಂಚಾಯತ್ ಉಪಾಧ್ಯಕ್ಷ ಪಿ.ಎಂ.ಕುರಿಯಾಕೋಸ್, ಪರಪ್ಪ ಬ್ಲಾಕ್ ಆರ್ಯೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಪದ್ಮಾ ಕುಮಾರಿ, ಪನತ್ತಡಿ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯರಾದ ಲತಾ ಅರವಿಂದನ್, ಸುಪ್ರಿಯಾ ಶಿವದಾಸ್, ವಾರ್ಡ್ ಸದಸ್ಯರಾದ ಎಂ. ವಿನ್ಸೆಂಟ್, ಸಿ.ಕೆ.ಮಂಜುಷಾ, ಬಾಳೆ ಸಮಿತಿ ಅಧ್ಯಕ್ಷ ವಿನೋಜ್‍ಮಥಾಯಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪನತ್ತಡಿ ಕೃಷಿ ಅಧಿಕಾರಿ ಅರುಣ್ ಜೋಸ್ ಸ್ವಾಗತಿಸಿದರು. ಕೇರಾ ಸಮಿತಿ ಕಾರ್ಯದರ್ಶಿ ಅನಿಲ್ ಕೆ ನಾಯರ್ ವಂದಿಸಿದರು. ಈ ಸಂದರ್ಭ ವೈಜ್ಞಾನಿಕ ತೆಂಗಿನ ಕೃಷಿ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು.
ಎರಡು ಪಂಚಾಐಇತಿಗಳಲ್ಲಿ ಜಾರಿ:
ರಾಜ್ಯ ಕೃಷಿ ಇಲಾಖೆಯ ಸಮಗ್ರ ತೆಂಗು ಕೃಷಿ ಅಭಿವೃದ್ಧಿಗೆ ಗುರಿಯಾಗಿರುವ ಕೆರಗ್ರಾಮ ಯೋಜನೆಯನ್ನು ಜಿಲ್ಲೆಯ ಪಣತ್ತಡಿ ಮತ್ತು ಮೀಂಜ ಪಂಚಾಯಿತಿಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಮೂರು ವರ್ಷದ ಯೋಜನೆಯನ್ವಯ 100 ಎಕರೆ ತೆಂಗು ಬೆಳೆಗಾಗಿ 25 ಲಕ್ಷ ರೂ. ಮಂಜೂರುಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ತೆಂಗಿನ ಹಾಸು ತುಂಬುವುದು, ಬೆಡ್ ಓಪನಿಂಗ್ ಮತ್ತು ಹಸಿರು ಗೊಬ್ಬರ ಹಾಕುವ ಕಾರ್ಯ ಜಾರಿಯಾಗಲಿದೆ. ನಂತರ ಮಣ್ಣಿನ ಸಂರಕ್ಷಣೆ ಕಾರ್ಯಕ್ರಮದ ಅಂಗವಾಗಿ ಸಾವಯವ ಗೊಬ್ಬರ, ರಾಸಾಯನಿಕ ಗೊಬ್ಬರ ಮತ್ತು ಸುಣ್ಣ ಮತ್ತು ಸೂಕ್ಷ್ಮಜೀವಾಣು ಗೊಬ್ಬರ ವಿತರಿಸಲಾಗುವುದು. ಮುಂದಿನ ಹಂತದಲ್ಲಿ ತೆಂಗಿನಕಾಯಿಗೆ ರೋಗ ನಿಯಂತ್ರಣಕ್ಕೆ ನೆರವು ನೀಡಲಾಗುವುದು. ಹಾನಿಗೊಳಗಾದ ತೆಂಗಿನಕಾಯಿಯನ್ನು ಕತ್ತರಿಸಲು ಮತ್ತು ಬದಲಾಯಿಸಲು ಒಂದು ಸಾವಿರ ರೂ. ಮಂಜೂರುಗೊಳಿಸಲಾಗುವುದು. ಕತ್ತರಿಸಿದ ತೆಂಗಿನಕಾಯಿಗೆ ಬದಲಾಗಿ ತೆಂಗಿನ ಸಸಿಗಳನ್ನು ನೆಡಲು ಸಹ ನೆರವು ನೀಡಲಾಗುವುದು. ಪಂಚಾಯಿತಿಯ ಆಯ್ದ ವಾರ್ಡ್‍ಗಳಲ್ಲಿ ಕೇರ ಸಂಘ ಒಕ್ಕೂಟವನ್ನು ರಚಿಸಲಾಗುವುದು.