ಎರ್ನಾಕುಳಂ: ಧರ್ಮನಿಂದನೆ ಆರೋಪದ ಮೇಲೆ ಪ್ರಾಧ್ಯಾಪಕ ಟಿಜೆ ಜೋಸೆಫ್ ಅವರ ಕೈಕತ್ತರಿಸಿದ ಪ್ರಕರಣದ ಮುಖ್ಯ ಆರೋಪಿ ಸವಾದ್ ನ 13 ವರ್ಷಗಳ ಅಜ್ಞಾತ ಜೀವನವನ್ನು ಎನ್ಐಎ ಬಿಚ್ಚಿಡಲಿದೆ.
ಸವಾದ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆತನ ಸಂಬಂಧಿಕರು ಮತ್ತು ವಿವಾಹ ನಡೆಸಿದ ಮಸೀದಿಯ ಪ್ರಮುಖರನ್ನು ವಿಚಾರಣೆ ನಡೆಸಲಾಗುವುದು.
ಸವಾದ್ ನ ಪತ್ನಿ, ಮಾವ ಮತ್ತು ಸವಾದ್ ನ ವಿವಾಹ ನೆರವೇರಿಸಿದ ತಿರುನಾಡಿನ ಮಸೀದಿ ಮುಖ್ಯಸ್ಥರಿಗೆ ನಾಳೆ ಕೊಚ್ಚಿಯಲ್ಲಿರುವ ಎನ್ಐಎ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. 13 ವರ್ಷಗಳಿಂದ ತನಿಖಾ ತಂಡದ ಕಣ್ಣು ತಪ್ಪಿಸಲು ಸವಾದ್ ಗೆ ದೊಡ್ಡ ಮೊತ್ತದ ನೆರವು ಸಿಕ್ಕಿದೆ ಎಂದು ಅಂದಾಜಿಸಲಾಗಿದೆ.
ಸವಾದ್ ಕಣ್ಣೂರಿನಲ್ಲಿ ಮಾತ್ರ 8 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಎಸ್‍ಡಿಪಿಐ ನೆರವಿನಿಂದ ವಳಪಟ್ಟಣ, ಇರಿಟ್ಟಿ ಮತ್ತು ಮಟ್ಟನ್ನೂರಿನಲ್ಲಿ ಸವಾದ್ ಬಾಡಿಗೆ ಮನೆಗಳಲ್ಲಿ ವಾಸಿಸಿದ್ದ. ಷÀಹಜಹಾನ್ ಎಂಬ ಹೆಸರಿನಲ್ಲಿ ಮಟ್ಟನ್ನೂರಿನಲ್ಲಿ ತಲೆಮರೆಸಿಕೊಂಡಿದ್ದ ಸವಾದ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದಾಗ ಬಂಧಿಸಲಾಗಿತ್ತು.