HEALTH TIPS

ರಕ್ಷಣಾ ಸಹಕಾರ: ಭಾರತ-ಫ್ರಾನ್ಸ್‌ ಮಧ್ಯೆ ಹಲವು ಒಪ್ಪಂದ

                ವದೆಹಲಿ: ಸೇನೆ-ಕೈಗಾರಿಕೆಗಳಲ್ಲಿ ಬಳಸುವ ಹಾರ್ಡ್‌ವೇರ್‌ ಮತ್ತು ತಂತ್ರಜ್ಞಾನಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಹಾಗೂ ಉತ್ಪಾದನೆಯನ್ನು ಉತ್ತೇಜಿಸುವ ವಿಷಯದಲ್ಲಿ ಸಹಭಾಗಿತ್ವಕ್ಕೆ ಭಾರತ ಮತ್ತು ಫ್ರಾನ್ಸ್‌ ಸಮ್ಮತಿಸಿವೆ.

              ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್ ಅವರ ನಡುವೆ ಜೈಪುರದಲ್ಲಿ ಗುರುವಾರ ರಾತ್ರಿ ನಡೆದ ಸಭೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಪಾಲುದಾರಿಕೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

               'ರಕ್ಷಣೆ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಪಾಲುದಾರಿಕೆ ಜೊತೆಗೆ, ಬಾಹ್ಯಾಕಾಶ, ಸೈಬರ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಹಭಾಗಿತ್ವಕ್ಕೆ ಉಭಯ ನಾಯಕರು ಸಮ್ಮತಿಸಿದರು. ಇದೇ ವೇಳೆ, ಹಲವು ಒಪ್ಪಂದಗಳಿಗೂ ಸಹಿ ಹಾಕಲಾಯಿತು' ಎಂದು ಹೇಳಿದ್ದಾರೆ.

              'ಟಾಟಾ ಸಮೂಹ ಹಾಗೂ ಏರ್‌ಬಸ್‌ ಹೆಲಿಕಾಪ್ಟರ್ಸ್‌ ಜಂಟಿಯಾಗಿ ಎಚ್‌-125 ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಕುರಿತು ಒಪ್ಪಂದಕ್ಕೆ ಸಹಿ ಹಾಕಿದವು. ಈ ಹೆಲಿಕಾಪ್ಟರ್‌ಗಳ ತಯಾರಿಕೆಗೆ ಅಗತ್ಯವಿರುವ ಸಲಕರಣೆಗಳನ್ನು ದೇಶೀಯವಾಗಿಯೇ ತಯಾರಿಸಲಾಗುವುದು' ಎಂದು ಮಾಹಿತಿ ನೀಡಿದರು.

                 'ರೋಬೊಟಿಕ್ಸ್, ಸ್ವಯಂಚಾಲಿತ ವಾಹನಗಳ ತಯಾರಿಕೆ ಮತ್ತು ಸೈಬರ್‌ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಯಲ್ಲಿ ಸಹಕಾರ ಹೆಚ್ಚಿಸಲು ಎರಡೂ ದೇಶಗಳು ಸಮ್ಮತಿಸಿದವು' ಎಂದರು.

'ಉಪಗ್ರಹಗಳ ಉಡ್ಡಯನದಲ್ಲಿ ಸಹಕಾರ ವಿಸ್ತರಿಸುವುದಕ್ಕೆ ಸಂಬಂಧಿಸಿ ಇಸ್ರೊ ಅಂಗಸಂಸ್ಥೆ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಹಾಗೂ ಫ್ರಾನ್ಸ್‌ನ ಏರಿಯನ್‌ಸ್ಪೇಸ್ ಸಂಸ್ಥೆ ಒಪ್ಪಂದಕ್ಕೆ ಸಹಿ ಹಾಕಿದವು' ಎಂದು ವಿವರಿಸಿದರು.

                 ಇಸ್ರೇಲ್‌ ಹಾಗೂ ಹಮಾಸ್‌ ಬಂಡುಕೋರರ ನಡುವಿನ ಸಂಘರ್ಷ, ವಿಶ್ವದ ಹಲವೆಡೆ ಕಂಡುಬರುತ್ತಿರುವ ಭಯೋತ್ಪಾದಕ ಕೃತ್ಯಗಳು, ಕೆಂಪು ಸಮುದ್ರ ಪ್ರದೇಶದಲ್ಲಿ ಭದ್ರತೆಗೆ ಎದುರಾಗಿರುವ ಸವಾಲುಗಳು ಸೇರಿದಂತೆ ಹಲವು ವಿದ್ಯಮಾನಗಳ ಕುರಿತು ಮೋದಿ ಮತ್ತು ಮ್ಯಾಕ್ರನ್‌ ಚರ್ಚಿಸಿದರು ಎಂದೂ ಅವರು ಮಾಹಿತಿ ನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries