HEALTH TIPS

ಘಟಿಕೋತ್ಸವ: ಕೈಮಗ್ಗದ ನಿಲುವಂಗಿ ಬಳಸಲು ಯುಜಿಸಿ ಸೂಚನೆ

              ವದೆಹಲಿ: ಘಟಿಕೋತ್ಸವ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಕೈಮಗ್ಗದಿಂದ ಮಾಡಿದ ನಿಲುವಂಗಿಗಳನ್ನು ಬಳಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ಮತ್ತೊಮ್ಮೆ ಸೂಚನೆ ನೀಡಿದೆ. ಈ ಸಂಬಂಧ ಯುಜಿಸಿ 2015 ಹಾಗೂ 2019ರಲ್ಲಿಯೂ ಸೂಚನೆ ನೀಡಿತ್ತು.

             ಕೈಮಗ್ಗದ ಬಟ್ಟೆಗಳಿಂದ ಮಾಡಿದ ಉಡುಪುಗಳು ಭಾರತದ ಹವಾಮಾನಕ್ಕೆ ಹೆಚ್ಚು ಆರಾಮದಾಯಕ ಮತ್ತು ಭಾರತೀಯರಿಗೆ ಹೆಮ್ಮೆಯ ಪ್ರತೀಕ ಎಂದು ಯುಜಿಸಿ ಹೇಳಿದೆ.

             ಈ ಸಂಬಂಧ ಯುಜಿಸಿ ಈ ಹಿಂದೆ ನೀಡಿದ್ದ ಸಲಹೆಯನ್ನು ಅನೇಕ ವಿಶ್ವವಿದ್ಯಾಲಯಗಳು ಪಾಲಿಸುತ್ತಿದ್ದು, ತಮ್ಮ ವಾರ್ಷಿಕ ಘಟಿಕೋತ್ಸವಗಳಲ್ಲಿ ಕೈಮಗ್ಗದ ನಿಲುವಂಗಿಗಳನ್ನು ಬಳಸುತ್ತಿವೆ. ಆದರೆ ಕೆಲ ವಿಶ್ವವಿದ್ಯಾಲಯಗಳು ತಮ್ಮ ಘಟಿಕೋತ್ಸವಗಳ ಸಮವಸ್ತ್ರ ಸಂಹಿತೆಯನ್ನು ಇನ್ನೂ ಬದಲಿಸಿಲ್ಲ. ಹೀಗಾಗಿ ಮತ್ತೊಮ್ಮೆ ಈ ಕುರಿತು ಎಲ್ಲ ವಿ.ವಿಗಳಿಗೆ ಮನವಿ ಮಾಡಲಾಗುತ್ತಿದೆ' ಎಂದು ಯುಜಿಸಿ ಕಾರ್ಯದರ್ಶಿ ಮನೀಸ್‌ ಆರ್‌. ಜೋಶಿ ಪತ್ರದಲ್ಲಿ ತಿಳಿಸಿದ್ದಾರೆ.

             'ಕೈಮಗ್ಗದ ಉಡುಪುಗಳನ್ನು ಬಳಸುವುದು ಭಾರತೀಯರಿಗೆ ಒಂದೆಡೆ ಹೆಮ್ಮೆಯ ಪ್ರತೀಕವಾಗಿದ್ದರೆ, ಇನ್ನೊಂದೆಡೆ ದೇಶದ ಗ್ರಾಮೀಣ ಭಾಗದ ಹಲವರಿಗೆ ಉದ್ಯೋಗಾವಕಾಶ ಒದಗಿಸಿದಂತಾಗುತ್ತದೆ' ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

                   ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ತೆಗೆದುಕೊಂಡ ಕ್ರಮಗಳ ಕುರಿತು ಫೋಟೊ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries