ಬದಿಯಡ್ಕ : ಮಂಡ್ಯದ ರಾಜೇನಹಳ್ಳಿ ಮುಕುಂದ ಕ್ರಿಯೇಷನ್ಸ್ ಲಾಂಛನದಡಿ ಜಿಲ್ಲೆಯ ಬನದಗದ್ದೆ ಕ್ರಿಯೇಷನ್ಸ್ ಮತ್ತು ಬದಿಯಡ್ಕ ಅಂಜಲಿ ಕ್ರಿಯೇಷನ್ಸ್ ನಿರ್ಮಾಣದಲ್ಲಿ ನಿರ್ಮಾಣಗೊಂಡಿರುವ "ಕೇಳುವರಾರು" ಧ್ವನಿಸುರುಳಿ ಬಿಡುಗಡೆ ಬೆಂಗಳೂರಿನ ಪಟೇಲ್ ಲೇಔಟ್ ನ ಬ್ರಿಲಿಯಂಟ್ ಅಕಡೆಮಿ ಸ್ಕೂಲ್ ನಲ್ಲಿ ನಡೆಯಿತು.
ಚಲನಚಿತ್ರ ಸಂಗೀತ ನಿರ್ದೇಶಕ ವಿ.ಮನೋಹರ್ ಧ್ವನಿಸುರುಳಿ ಬಿಡುಗಡೆಗೊಳಿಸಿದರು. ವಿದ್ವಾನ್ ಡಾ.ಕಾಸಿಂ ಮಲ್ಲಿಗೆಮಡವು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಇತಿಹಾಸ ಅಕಾಡೆಮಿ ಕಾಸರಗೋಡು ಗಡಿನಾಡ ಘಟಕ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಮುಕುಂದ ಆರ್. ಮಂಡ್ಯ ಉಪಸ್ಥಿತರಿದ್ದರು. ಸಹನಾ ಆರ್.ಎಂ.ಮಂಡ್ಯ ಸ್ವಾಗತಿಸಿದರು. ಚಿತ್ರನಟಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಬದಿಯಡ್ಕದ ಗಡಿನಾಡ ಗಾನಕೋಗಿಲೆ ವೇದಿಕೆ ಅಧ್ಯಕ್ಷ ವಸಂತ ಬಾರಡ್ಕ ವಂದಿಸಿದರು. ಮಂಡ್ಯದ ಮಂಜುನಾಥ, ಬೆಂಗಳೂರಿನ ಸಂತೋಷ್, ನಂದಿನಿ ಇವರಿಂದ ರಸಮಂಜರಿ, ಕವಿಗೋಷ್ಠಿ ನಡೆಯಿತು.