HEALTH TIPS

ಆಲೋವೆರಾ ಗಿಡ ಮನೆಯಲ್ಲಿಟ್ಟರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ? ಎಚ್ಚರ ಈ ತಪ್ಪು ಮಾಡಬೇಡಿ..!

 ಆಲೋವೆರಾ ಹೆಚ್ಚಿನವರು ಇದನ್ನು ಮುಖದ ಕಾಂತಿ ಹೆಚ್ಚಲೆಂದು ಬಳಸುತ್ತಾರೆ. ಅದರ ಲೋಳೆಯಂತಹ ರಸವು ಚರ್ಮದ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದ್ದು, ಹೆಚ್ಚಿನವರು ಮುಖಕ್ಕೆ ಹಚ್ಚುತ್ತಾರೆ. ಜೊತೆಗೆ ವಿವಿಧ ಚರ್ಮ ಚಿಕಿತ್ಸಾ ಕೇಂದ್ರದಲ್ಲೂ ಇದೊಂದು ಔಷಧಿ ಸಸ್ಯವಾಗಿ ಬಳಕೆಯಲ್ಲಿದೆ. ಇದಿಷ್ಟೇ ಅಲ್ಲ ಆಲೋವೆರಾವನ್ನು ಕೆಲವರು ಮನೆಯಲ್ಲಿ ವಾಸ್ತುವಾಗಿ ಇಡುತ್ತಾರೆ.

ಹಾಗಾದರೆ ಆಲೋವೆರಾ ಮನೆಯಲ್ಲಿದ್ದರೆ ಏನೆಲ್ಲಾ ಉಪಯೋಗವಿದೆ? ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು, ಯಾವದಿಕ್ಕಿನಲ್ಲಿ ಆಲೋವೆರಾ ಇಡಬಾರದು ಎಂಬ ಎಲ್ಲಾ ಪ್ರಶ್ನೆಗಳಿಗೆ ವಾಸ್ತುಶಾಸ್ತ್ರದಲ್ಲಿ ಉತ್ತರವಿದೆ. ಆದರೆ ಈ ಆಲೋವೆರಾ ಮನೆಯ ಪರಿಸರದಲ್ಲಿ ಉತ್ತಮ ಪ್ರಗತಿಯನ್ನು ತರುತ್ತದೆ ಮತ್ತು ಮನೆಯಲ್ಲಿನ ಅನೇಕ ಸಮಸ್ಯೆಗಳನ್ನು ತಡೆಯುತ್ತದೆ ಎಂದು ನಂಬಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕ್ಯಾಕ್ಟಸ್ ಗಿಡವನ್ನು ಬೆಳೆಸಿದರೆ ಹಲವಾರು ಪ್ರಯೋಜನಗಳಿವೆ. ಆದರೆ, ಆ ಪ್ರಯೋಜನಗಳನ್ನು ಪಡೆಯಲು ಆಲೋವೆರಾ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಬೇಕು. ಆಗ ಮಾತ್ರ ಸಂಪೂರ್ಣ ಲಾಭ ಸಿಗುತ್ತದೆ. ಆಲೋವೆರಾ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಆಗುವ ಲಾಭಗಳೇನು ಮತ್ತು ಅಲೋ ಗಿಡವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ನಾವು ತಿಳಿದುಕೊಳ್ಳುವುದು ಅತೀ ಅವಶ್ಯಕ.

1. ವಾಸ್ತು ಪ್ರಕಾರ, ಆಲೋವೆರಾ ಗಿಡವನ್ನು ಮನೆಗೆ ಧನಾತ್ಮಕ ಶಕ್ತಿಯನ್ನು ತರಬಲ್ಲ ಸಸ್ಯವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ನೆಗೆಟಿವ್ ಎನರ್ಜಿ ಮನೆಗೆ ಬರದಂತೆ ತಡೆಯುತ್ತದೆ. ಅಲ್ಲದೆ ಮನೆಯಲ್ಲಿನ ವಾಸ್ತು ದೋಷ ನಿವಾರಣೆಯಾಗುತ್ತದೆ.

2. ಯಾರ ಮನೆಯಲ್ಲಿ ಈ ಗಿಡ ಇದ್ದರೆ ಆ ಮನೆಯಲ್ಲಿರುವವರ ಅದೃಷ್ಟದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದರಿಂದ ಆ ಮನೆಯ ಸದಸ್ಯರು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೋ ಅದರಲ್ಲಿ ಉತ್ತಮ ಯಶಸ್ಸು ಸಿಗುತ್ತದೆ ಮತ್ತು ಕೆಲಸದಲ್ಲಿ ಎದುರಾದ ಅಡೆತಡೆಗಳು ನಿವಾರಣೆಯಾಗುತ್ತವೆ.

3. ಯಾವ ಮನೆಯಲ್ಲಿ ಹೆಚ್ಚು ಜಗಳವಾಗುತ್ತದೆಯೋ ಅಂತಹ ಮನೆಯಲ್ಲಿ ಆಲೋವೆರಾ ಸಸಿ ಇಡಬೇಕಂತೆ. ಇದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎನ್ನಲಾಗಿದೆ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ, ಮನೆಯಲ್ಲಿ ಸುಖ-ಶಾಂತಿ ಹೆಚ್ಚುತ್ತದೆ ಮತ್ತು ಕುಟುಂಬ ಸದಸ್ಯರ ನಡುವೆ ಬಾಂಧವ್ಯ ಹೆಚ್ಚುತ್ತದೆ. 

4. ಮನೆಯಲ್ಲಿ ಆಲೋ ಸಸ್ಯವನ್ನು ಬೆಳೆಸುವ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಕೆಲಸ ಮಾಡುವವರಿಗೆ ಉತ್ತಮ ಯಶಸ್ಸು ಮತ್ತು ಉತ್ತಮ ಪ್ರಗತಿ. 

5. ನಿಮ್ಮ ಮನೆಯ ಜನರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಾರೆಯೇ? ಹಾಗಿದ್ದರೆ ಮನೆಯಲ್ಲಿ ಆಲೋವೆರಾ ಬೆಳೆಸುವುದರಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

 ಆಲೋವೆರಾ ಗಿಡವನ್ನು ಯಾವ ದಿಕ್ಕಿನಲ್ಲಿ ಬೆಳೆಸಬೇಕು? ವಾಸ್ತು ಪ್ರಕಾರ ಆಲೋ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಬೇಕು. ಮನೆಯಲ್ಲಿ ಆಲೋವೆರಾವನ್ನು ಇಡಲು ಉತ್ತಮವಾದ ದಿಕ್ಕು ಉತ್ತರ ಅಥವಾ ಪೂರ್ವ. ಏಕೆಂದರೆ ಈ ಎರಡೂ ದಿಕ್ಕುಗಳು ಶುಭ ದಿಕ್ಕುಗಳು. ಇದಲ್ಲದೆ ಮನೆಯ ಮುಂದೆ ಟೆರೆಸ್‌ಗೆ ಇದನ್ನು ನೇತುಹಾಕಬಹುದು. ಸತ್ತಿರುವ ಆಲೋವೆರಾ ಗಿಡವನ್ನು ಮನೆಯೊಳಗೆ ಇಟ್ಟುಕೊಳ್ಳಬಾರದು. ಒಂದು ಬಾರಿ ಅದನ್ನು ವಾಸ್ತು ಪ್ರಕಾರವಾಗಿ ಇಟ್ಟ ಬಳಿದ ಅದರ ಎಲೆಗಳನ್ನು ಕೀಳುವುದು, ಅದನ್ನು ಔ‍ಷಧಿಗಾಗಿ ಬಳಸಬಾರದು. 

ಆರ್ಥಿಕ ಸಮಸ್ಯೆಗಳಿಗೆ ಅಲೋವೆರಾ ಪರಿಹಾರ! ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸಮಸ್ಯೆಗಳಿದ್ದರೆ ಅವರು ತಮ್ಮ ಮನೆಯ ಉದ್ಯಾನ ಅಥವಾ ಬಾಲ್ಕನಿಯಲ್ಲಿ ಅಲೋವೆರಾ ಗಿಡವನ್ನು ನೆಡಬೇಕು. ಇದನ್ನು ಯಾವುದೇ ಕಾರಣಕ್ಕೂ ಮನೆಯೊಳಗೆ ಇಟ್ಟುಕೊಳ್ಳಬಾರದು. ಮನೆಯಲ್ಲಿ ಇದನ್ನು ಮನೆಯ ಹೊರಾಂಗಣದಲ್ಲಿ ನಡೆವುದರಿಂದ ನಕಾರಾತ್ಮಕತೆ ದೂರವಾಗುತ್ತದೆ. ಮತ್ತು ಮನಸ್ಸು ವಿಚಲಿತವಾಗಿದ್ದರೆ ಅದು ಶಾಂತವಾಗುತ್ತದೆ. ಹಾಗೂ ನಿಮ್ಮೆಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ. 

ಆಲೋವೆರಾವನ್ನು ಹೀಗೆಲ್ಲಾ ಬಳಸಬೇಡಿ ಆಲೋವೆರಾ ಗಿಡವನ್ನು ಮನೆಯಲ್ಲಿಟ್ಟು ನೀರು ಹಾಕದೆ ಸಾಯಿಸಬೇಡಿ. ಅದರಿಂದ ಅಶುಭ ಕಾಡಲಿದೆ. ಆಲೋವೆರಾ ಗಿಡವನ್ನು ಬಾತ್‌ರೂಮ್‌ನಲ್ಲಿಡುವುದು ಕೆಟ್ಟ ದಿನಗಳಿಗೆ ಕಾರಣವಾಗಬಹುದು. ಇದರ ಜೊತೆ ಆಲೋವೆರಾವನ್ನು ದೇವರ ಕೋಣೆಯಲ್ಲೂ ಇಡಬಾರದು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries