ಪತ್ತನಂತಿಟ್ಟ: ಶಬರಿಮಲೆಯ ಪ್ರಮುಖ ಪ್ರಸಾದ ಅರವಣ ಪೂರೈಕೆಯಲ್ಲಿ ಬಿಕ್ಕಟ್ಟು ಮುಂದುವರಿದಿದೆ. ಟಿನ್‍ಗಳ ಕೊರತೆಯಿಂದ ಬಿಕ್ಕಟ್ಟು ಉಂಟಾಗಿದೆ.
ಪ್ರಸ್ತುತ ಪ್ರತಿ ಯಾತ್ರಿಕರಿಗೆ ಕೇವಲ ಐದು ಟಿನ್ ಅರವಣವನ್ನು ವಿತರಿಸಲಾಗುತ್ತದೆ. ಕಳೆದ ಭಾನುವಾರದಿಂದ ಅರವಣ ವಿತರಣೆಗೆ ನಿರ್ಬಂಧ ಹೇರಲಾಗಿದೆ.
ಇಂದು ಹೆಚ್ಚಿನ ಟಿನ್‍ಗಳು ಆಗಮಿಸಲಿವೆ ಎಂದು ದೇವಸ್ವಂ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅರವಣಕ್ಕಾಗಿ ಟಿನ್‍ಗಳ ಗುತ್ತಿಗೆಯನ್ನು ಎರಡು ಕಂಪನಿಗಳಿಗೆ ನೀಡಲಾಗಿದೆ. ಕಂಪನಿಯೊಂದು ಟಿನ್ ಗಳನ್ನು ನೀಡದಿರುವುದು ಬಿಕ್ಕಟ್ಟಿಗೆ ಕಾರಣ. ಸಮಸ್ಯೆ ಪರಿಹರಿಸಲು ಇನ್ನೂ ಎರಡು ಕಂಪನಿಗಳಿಗೆ ಟಿನ್‍ಗಳನ್ನು ತಯಾರಿಸುವ ಗುತ್ತಿಗೆ ನೀಡಲಾಗಿದೆ. ಇದರಿಂದ ಬಿಕ್ಕಟ್ಟು ಅಂತ್ಯವಾಗಲಿದೆ ಎಂದು ದೇವಸ್ವಂ ಮಂಡಳಿ ಮಾಹಿತಿ ನೀಡಿದೆ.
ಶಬರಿಮಲೆಯಲ್ಲಿ ಪ್ರತಿನಿತ್ಯ ಮೂರು ಲಕ್ಷದವರೆಗೆ ಅರವಣ ಹಂಚಲಾಗುತ್ತಿತ್ತು. ಆದರೆ ಭಾನುವಾರದಿಂದ ಇದರಲ್ಲಿ ಅರ್ಧದಷ್ಟು ಮಾತ್ರ ಅರವಣ ವಿತರಣೆಯಾಗುತ್ತಿದೆ.