ಪಣಜಿ: ಗೋವಾದ ಕ್ಯಾಬೋ ಡಿ ರಾಮಾ ಸಮುದ್ರದಲ್ಲಿ ಪತ್ನಿಯನ್ನು ಮುಳುಗಿಸಿ ಹತ್ಯೆಗೈದು ಅಪಘಾತವೆಂಬಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ಗೋವಾದ ಐಷಾರಾಮಿ ಹೊಟೇಲ್‌ನ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ.
ಪಣಜಿ: ಗೋವಾದ ಕ್ಯಾಬೋ ಡಿ ರಾಮಾ ಸಮುದ್ರದಲ್ಲಿ ಪತ್ನಿಯನ್ನು ಮುಳುಗಿಸಿ ಹತ್ಯೆಗೈದು ಅಪಘಾತವೆಂಬಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ಗೋವಾದ ಐಷಾರಾಮಿ ಹೊಟೇಲ್‌ನ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಗೌರವ್ ಕಟಿಯಾರ್ (29) ಎಂದು ಗುರುತಿಸಲಾಗಿದ್ದು, ಮೃತ ಪತ್ನಿಯನ್ನು ದೀಕ್ಷಾ ಗಂಗವಾರ್ (27) ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಅದೇ ದಿನ ಸಂಜೆ ದೀಕ್ಷಾ ಅವರ ಮೃತದೇಹ ಸಮುದ್ರ ತಟದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಗೌರವ್ ಅವರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.